ಕೊರೋನ ಮುನ್ನಚ್ಚೆರಿಕೆ: ಮಂಗಳೂರು ಕಾರಾಗೃಹದಿಂದ ಕೈದಿಗಳ ಸ್ಥಳಾಂತರ

ಮಂಗಳೂರು, ಎ.18: ಕೊರೋನ ಸೋಂಕು ಹರಡದಂತೆ ತಪ್ಪಿಸಲು ಸುಪ್ರಿಂಕೋರ್ಟ್ ನಿರ್ದೇಶನದಂತೆ ಮಂಗಳೂರು ಕಾರಾಗೃಹದ ಕೈದಿಗಳನ್ನು ಸ್ಥಳಾಂತರ ಮಾಡಲಾಗಿದೆ.
ವಿಚಾರಣಾಧೀನ ಸುಮಾರು 80 ಕೈದಿಗಳನ್ನು ಮಂಗಳೂರಿನಿಂದ ಕಾರವಾರ ಹಾಗೂ ಚಿಕ್ಕಮಗಳೂರು ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಸರಕಾರಿ ಬಸ್ ಮೂಲಕ 40 ಜನ ಕೈದಿಗಳಂತೆ ಎರಡು ಬಸ್‌ಗಳ ಮೂಲಕ ಕಾರವಾರ ಮತ್ತು ಚಿಕ್ಕಮಗಳೂರು ಜೈಲಿಗೆ ಕೊಂಡೊಯ್ಯಲಾಗುತ್ತಿದೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ ಕಲಬುರಗಿ, ಬೆಂಗಳೂರು ಜೈಲುಗಳಿಂದ ಈಗಾಗಲೇ ವಿಚಾರಣಾಧೀನ ಕೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಕೊರೋನ ವೈರಸ್ ಹರಡದಂತೆ ಸಾಮಾಜಿಕ ಅಂತರ ಕಾಪಾಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಜೈಲಿನಲ್ಲಿ ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.

Scroll to Top