ತಮಿಳುನಾಡಿನಿಂದ ಬೈಕಿನಲ್ಲಿ ಕಡಬಕ್ಕೆ ಆಗಮಿಸಿದ ನಾಲ್ವರು ➤ 40 ಕುಟುಂಬಗಳು ಆತಂಕದಲ್ಲಿ..!!

(ನ್ಯೂಸ್ ಕಡಬ) newskadaba.com ಕಡಬ, ಎ.09. ಕೊರೋನಾ ಭೀತಿ ನಡುವೆಯೂ ತಮಿಳುನಾಡಿನಿಂದ ಬೈಕಿ‌ನಲ್ಲಿ ಗಂಡ ಹೆಂಡತಿ ಇಬ್ಬರು ಮಕ್ಕಳೊಂದಿಗೆ ಕಡಬಕ್ಕೆ ಆಗಮಿಸಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.

ತಮಿಳುನಾಡಿನ ಕೊಯಂಬತ್ತೂರು ಕಲೆಕ್ಟರ್ ಕಛೇರಿಯಿಂದ ಮೆಡಿಕಲ್ ಎಮರ್ಜೆನ್ಸಿ ಪಾಸ್‌ ಪಡೆದುಕೊಂಡು ಬೈಕಿನಲ್ಲಿ ನೇರವಾಗಿ ಕಡಬ ತಾಲೂಕಿನ ಐತ್ತೂರು ಗ್ರಾಮದ ಓಟಕಜೆ ಸಿ.ಆರ್.ಸಿ ಕಾಲನಿಗೆ ಆಗಮಿಸಿದೆ. ಸುಮಾರು 40 ಕುಟುಂಬಗಳು ಈ ಕಾಲನಿಯಲ್ಲಿ ವಾಸಿಸುತಿದ್ದು, ಕಾಲನಿಯಲ್ಲಿ ಭಯದ ವಾತಾವರಣ ಶುರುವಾಗಿದೆ. ಈ ಬಗ್ಗೆ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ‌ ನೀಡಿದ್ದಾರೆ.

Also Read  ಅಕ್ರಮ ಮರ ಸಾಗಾಟ- ಟಿಪ್ಪರ್ ಚಾಲಕ ವಶಕ್ಕೆ

error: Content is protected !!
Scroll to Top