-
ಇನ್ಮುಂದೆ ಕೆಲವೇ ಗಂಟೆಗಳಲ್ಲಿ ವರದಿ ಲಭ್ಯ
ಮಂಗಳೂರು, ಎ.7: ಇಲ್ಲಿನ ಜಿಲ್ಲಾಸ್ಪತ್ರೆ ವೆನ್ಲಾಕ್‌ನಲ್ಲಿ ಕೊರೋನ ಪರೀಕ್ಷಾ ಪ್ರಯೋಗಾಲಯ ಅಧಿಕೃತವಾಗಿ ಆರಂಭಗೊಂಡಿದೆ.
ವೆನ್ಲಾಕ್‌ನಲ್ಲಿ ಆರಂಭಿಸಲಾಗಿರುವ ವೈರಾಣು ಸಂಶೋಧನಾ ಮತ್ತು ರೋಗ ಪರೀಕ್ಷಾ ಪ್ರಯೋಗಾಲಯವು ಸರಕಾರದಿಂದ ಎಲ್ಲ ರೀತಿಯ ಪರಿಶೀಲನೆಗೆ ಒಳಪಟ್ಟು ಸುಸೂತ್ರ ಕಾರ್ಯಾರಂಭಕ್ಕೆ ಅನುಮತಿ ದೊರಕಿದೆ. ಹೀಗಾಗಿ ಮಹಾಮಾರಿ ಕೊರೋನ ಸೊಂಕಿನ ಪರೀಕ್ಷಾ ವರದಿ ಬೆಂಗಳೂರು, ಶಿವಮೊಗ್ಗದಿಂದ ಬರುವಿಕೆಗಾಗಿ ಕಾಯುವುದಕ್ಕೆ ಇನ್ಮುಂದೆ ಬ್ರೇಕ್ ಬೀಳಲಿದ್ದು, ತತ್‌ಕ್ಷಣವೇ ವರದಿ ಲಭ್ಯವಾಗಲಿದೆ.
ಮಂಗಳೂರಿನಲ್ಲಿ ಕೊರೋನ ಸಹಿತ ವೈರಾಣು ಪತ್ತೆ ಪ್ರಯೋಗಾಲಯ ಆರಂಭಕ್ಕೆ ಮಂಜೂರಾತಿ ದೊರಕಿ ಎ.1ರಿಂದ ಇದರ ಪ್ರಯೋಗಿಕ ಪರೀಕ್ಷೆ ಆರಂಭವಾಗಿತ್ತು. ಇದೀಗ ಎ.7ರಿಂದ ಪೂರ್ಣ ಪ್ರಮಾಣದ ಪ್ರಯೋಗಾಲಯ ಆರಂಭವಾಗಿದ್ದು, ಗಂಟಲು ಸ್ರಾವ ಮಾದರಿ ಪರೀಕ್ಷಾ ವರದಿಯನ್ನು ಇನ್ಮುಂದೆ ಕೆಲವೇ ಗಂಟೆಗಳಲ್ಲಿ ಪಡೆಯಬಹುದಾಗಿದೆ. ಈವರೆಗೆ ವ್ಯಕ್ತಿಯಲ್ಲಿ ಕೊರೋನ ಇದೆಯೋ ಇಲ್ಲವೋ ಎಂದು ದೃಢಪಡಿಸಲು ನಾಲ್ಕೈದು ದಿನ ಕಾಯಬೇಕಿತ್ತು.
ವೆನ್ಲಾಕ್‌ನಲ್ಲಿ ಆರಂಭಿಸಲಾಗಿರುವ ವೈರಾಣು ಸಂಶೋಧನಾ ಮತ್ತು ರೋಗ ಪರೀಕ್ಷಾ ಪ್ರಯೋಗಾಲಯವು ಸರಕಾರದಿಂದ ಎಲ್ಲ ರೀತಿಯ ಪರಿಶೀಲನೆಗೆ ಒಳಪಟ್ಟು ಸುಸೂತ್ರ ಕಾರ್ಯಾರಂಭಕ್ಕೆ ಅನುಮತಿ ದೊರಕಿದೆ.
ರಾಜ್ಯದಲ್ಲಿ ಕೊರೋನ ಪ್ರಕರಣ ಹೆಚ್ಚುತ್ತಿರುವುದರಿಂದ ಎಲ್ಲಾ ಜಿಲ್ಲೆಗಳಲ್ಲೂ ಟೆಸ್ಟಿಂಗ್ ಲ್ಯಾಬ್ ತೆರೆಯುವ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಈ ಹಿಂದೆ ಮಂಗಳೂರಿಗೆ ಭೇಟಿ ನೀಡಿದ್ದಾಗ ಹೇಳಿದ್ದರು. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ವಿದೇಶದಲ್ಲಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಮತ್ತು ಶಂಕಿತ ಕೊರೋನ ಪ್ರಕರಣ ಹೆಚ್ಚುತ್ತಿರುವುದರಿಂದ ಟೆಸ್ಟಿಂಗ್ ಲ್ಯಾಬ್ ಅಗತ್ಯತೆ ಹೆಚ್ಚಿತ್ತು.
ಮಂಗಳೂರು ವೆನ್ಲಾಕ್ ನಲ್ಲಿ #ICMR, #NIV ಒಪ್ಪಿಗೆ ಪಡೆದು, #covid19 ಪರೀಕ್ಷಿಸಿ, ಕೆಲವೇ ಗಂಟೆಗಳಲ್ಲಿ ವರದಿ ನೀಡುವ Virology Research and Diagnostic Laboratory ಇಂದಿನಿಂದ ಕಾರ್ಯಾರಂಬಿಸಲಿದೆ. ಇದರಿಂದ ಶಂಕಿತರ ಪರೀಕ್ಷೆಗೆ ಹೊರಜಿಲ್ಲೆಯ ಅವಲಂಬನೆ ನಿಲ್ಲಲಿದೆ. ತುರ್ತು ಸ್ಪಂದಿಸಿದ ಕೇಂದ್ರ, ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು. pic.twitter.com/qC6cSc8EBD
— Kota Shrinivas Poojari (@KotasBJP) April 7, 2020