ಕೊರೋನಾ ವೈರಸ್ ಗೆ ಕರ್ನಾಟಕದಲ್ಲಿ ಮೊದಲ ಬಲಿ ➤ ಬೆಚ್ಚಿಬಿದ್ದ ಕರುನಾಡು

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.11. ಸಾವಿರಾರು ಜನಗಳ ಪ್ರಾಣಕ್ಕೆ ಕುತ್ತು ತಂದು ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ವೈರಸ್ ಕರ್ನಾಟಕದಲ್ಲಿ ಮೊದಲ ಬಲಿ ಪಡೆದುಕೊಂಡಿದೆ.

ಮೃತ ವ್ಯಕ್ತಿಯನ್ನು ಕಲಬುರಗಿ ನಿವಾಸಿ ಮಹಮ್ಮದ್ ಸಿದ್ದೀಕಿ (76) ಎಂದು ಗುರುತಿಸಲಾಗಿದೆ. ಕೆಲವು ಸಮಯಗಳ ಹಿಂದೆ ದುಬೈನಿಂದ ಆಗಮಿಸಿದ್ದ ಇವರಲ್ಲಿ ಶಂಕಿತ ಕೊರೋನಾ ವೈರಸ್ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರದಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Also Read  ಕಾಡಾನೆ ದಾಳಿ ➤ ಅಕ್ಕ ಮೃತ್ಯು, ತಂಗಿ ಗಂಭೀರ

error: Content is protected !!
Scroll to Top