ಚೀನಾಕ್ಕೆ ತೆರಳಿ ಹುಟ್ಟೂರಿಗೆ ಹಿಂತಿರುಗಿದ ಕಡಬದ ವ್ಯಕ್ತಿ ➤ ಕಡಬದಲ್ಲೂ ‘ಕೊರೋನಾ’ದ್ದೇ ಸುದ್ದಿ..!!

(ನ್ಯೂಸ್ ಕಡಬ) newskadaba.com ಕಡಬ, ಮಾ.11. ಚೀನಾ ದೇಶದಿಂದ ಆರಂಭಗೊಂಡ ಕೊರೋನಾ ವೈರಸ್‌ ಜಗತ್ತಿನ ವಿವಿಧೆಡೆ ವ್ಯಾಪಿಸಿರುವ ನಡುವೆಯೇ ಚೀನಾ ದೇಶಕ್ಕೆ ತೆರಳಿದ್ದ ವ್ಯಕ್ತಿಯೋರ್ವರು ಕಡಬಕ್ಕೆ ಆಗಮಿಸಿದ್ದರಿಂದ ಪರಿಸರದಲ್ಲಿ ಆತಂಕ ಸ್ಥಿತಿ ನಿರ್ಮಾಣವಾದ ಘಟನೆ ವರದಿಯಾಗಿದೆ.

 

ಚೀನಾ ದೇಶಕ್ಕೆ ತೆರಳಿದ್ದ ಕಡಬದ ವ್ಯಕ್ತಿಯೋರ್ವರು ಎರಡು ದಿನಗಳ ಹಿಂದೆ ತಾಯ್ನಾಡಿಗೆ ಮರಳಿದ್ದು, ವಿಮಾನ ನಿಲ್ದಾಣದಲ್ಲಿ ಅವರನ್ನು ತಪಾಸಣೆಗೊಳಪಡಿಸಿದಾಗ ಕೊರೋನಾ ವೈರಸ್ ಲಕ್ಷಣಗಳು ಕಂಡುಬಾರದ ಹಿನ್ನೆಲೆಯಲ್ಲಿ ಅವರನ್ನು ಮನೆಗೆ ಕಳುಹಿಸಲಾಗಿತ್ತು. ಆದರೆ ಅವರ ಮನೆಯ ಪರಿಸರದಲ್ಲಿ ಕೆಲವರು ಆತಂಕ ವ್ಯಕ್ತಪಡಿಸಿದ್ದರಿಂದ ಬುಧವಾರದಂದು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಆರೋಗ್ಯ ತಪಾಸಣೆ ನಡೆಸಿ ಮನೆಗೆ ಹಿಂತಿರುಗಿದ್ದಾರೆ.

Also Read  ಮೈಸೂರು ದಸರಾ-2024-  KSRTCಯಿಂದ 2000 ಹೆಚ್ಚುವರಿ ಬಸ್‌ ಸೇವೆ

ಚೀನಾದಿಂದ ಆಗಮಿಸಿದ ವ್ಯಕ್ತಿಯೋರ್ವರು ಕಡಬಕ್ಕೆ ಆಗಮಿಸಿದ್ದು, ಸ್ಥಳೀಯರು ತಿಳಿಸಿದ್ದರಿಂದ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ತಪಾಸಣೆ ನಡೆಸಲಾಗಿದ್ದು, ಕೊರೋನಾ ವೈರಸ್ ಲಕ್ಷಣಗಳು ಕಂಡುಬಾರದ ಹಿನ್ನೆಲೆಯಲ್ಲಿ ಕಳುಹಿಸಿಕೊಡಲಾಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ತ್ರಿಮೂರ್ತಿ ತಿಳಿಸಿದ್ದಾರೆ.

error: Content is protected !!
Scroll to Top