ವಿಟ್ಲ: ಬಾರ್‌ನಲ್ಲಿ ದಾಂಧಲೆ; 9 ಮಂದಿ ಪೊಲೀಸ್ ವಶಕ್ಕೆ

ವಿಟ್ಲ, ಫೆ.24: ಬಾರ್ ಸಿಬ್ಬಂದಿ ಹಾಗೂ ಸಾರ್ವಜನಿಕರೊಂದಿಗೆ ಗಲಾಟೆಗೆ ಮುಂದಾದ ಗುಂಪೊಂದರ ಹಲವು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ವಿಟ್ಲದಲ್ಲಿ ನಡೆದಿದೆ.

ಬೊಬ್ಬೆಕೇರಿಯ ಬಾರ್ ಬಳಿಯಲ್ಲಿ ಬಾರ್‌ನಲ್ಲಿ ಮದ್ಯ ಖರೀದಿಸಿ ಬಳಿಕ ಬಿಲ್ ಕೊಡದೆ ಸಿಬ್ಬಂದಿ ಹಾಗೂ ಸಾರ್ವಜನಿಕರ ಮೇಲೆ ಗುಂಪು ದಾಳಿಗೆ ಮುಂದಾಗಿದೆ. ಈ ಸಂದರ್ಭ ದಾಳಿಗೆ ಮುಂದಾದವರ ವಿರುದ್ಧ ಬಾರ್ ಮಾಲಕರು ಠಾಣೆಗೆ ದೂರು ನೀಡಿದ್ದಾರೆ.

ಅದರಂತೆ ದೂರು ದಾಖಲಿಸಿಕೊಂಡ ಎಸ್ಸೈ ವಿನೋದ್ ಎಸ್. ಅವರ ತಂಡ ತಕ್ಷಣ ಕಾರ್ಯ ಪ್ರವೃತ್ತರಾಗಿ ಎಲ್ಲಾ ಚೆಕ್ ಪೋಸ್ಟ್‌ಗಳಲ್ಲೂ ತಪಾಸಣೆ ಆರಂಭಿಸಿದ್ದಾರೆ. ಹಾಗೂ ಸುಮಾರು 9 ಮಂದಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Also Read  ಫೆಬ್ರವರಿ 18 ರಿಂದ 22 ರವರೆಗೆ ನೆಕ್ಕಿತ್ತಡ್ಕ ಮಖಾಂ ಉರೂಸ್ ► ಉರೂಸ್ ಅಂಗವಾಗಿ ಸಾರ್ವಜನಿಕ ಉಚಿತ ದಂತ ವೈದ್ಯಕೀಯ ಶಿಬಿರ

error: Content is protected !!
Scroll to Top