(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ. ಫೆ.22. ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ)ರನ್ನು ನಿಂದಿಸಿ ಅವಹೇಳನಕಾರಿ ಪದಬಳಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿರುವ ಬಗ್ಗೆ ಆರೋಪಿಯನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಎಸ್ಕೆಎಸ್ಸೆಸ್ಸೆಪ್ ಉಪ್ಪಿನಂಗಡಿ ವಲಯ ಸಮಿತಿ ವತಿಯಿಂದ ಉಪ್ಪಿನಂಗಡಿ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಿಸಲಾಯಿತು.
ಸಾಮಾಜಿಕ ಜಾಲತಾಣಗಳಲ್ಲೊಂದಾದ ಫೇಸ್ ಬುಕ್ ಪೇಜೊಂದರಲ್ಲಿ ಮದುಗಿರಿ ಮೋದಿ ಯಾನೆ ಅತುಲ್ ಕುಮಾರ್ ಎಂಬಾತ ಹಲವು ಬಾರಿ ಇದೇ ರೀತಿ ಜಾಲತಾಣದಲ್ಲಿ ಅನಾವಶ್ಯಕ ಆರೋಪಗಳನ್ನು ಮಾಡಿ ಮುಸ್ಲಿಂ ಧರ್ಮಕ್ಕೆ ಅವಮಾನ ಮಾಡುತ್ತಾ ಬಂದಿರುತ್ತಾನೆ. ಇದೀಗ ಮುಂದುವರೆಸಿ ಸರ್ವಧರ್ಮೀಯರೂ ಗೌರವಿಸುವ ಮುಸ್ಲಿಂ ಸಮುದಾಯ ತನ್ನ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ)ರನ್ನು ಅತ್ಯಂತ ಕೀಳು ಮಟ್ಟದ ಪದ ಬಳಸಿ ಅವಾಚ್ಯವಾಗಿ ನಿಂದನೆ ಮಾಡುವ ಮೂಲಕ ಭಾವೈಕ್ಯತೆಗೆ ದಕ್ಕೆ ತಂದು ಸಮಾಜದಲ್ಲಿ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿದ ಮದುಗಿರಿ ಮೋದಿ ಯಾನೆ ಅತುಲ್ ಕುಮಾರ್ ಇವನಿಗೆ ಕಾನೂನಿನಡಿಯಲ್ಲಿ ತಕ್ಕ ಶಿಕ್ಷೆಯನ್ನು ನೀಡಬೇಕು ಎಂದು ಆಗ್ರಹಿಸಿ ಉಪ್ಪಿನಂಗಡಿ ಪೋಲಿಸ್ ಠಾಣಾ ಎಸೈ ಈರಯ್ಯ ಇವರಿಗೆ ದೂರನ್ನು ಸಲ್ಲಿಸಲಾಯಿತು.
ವಲಯ ಅಧ್ಯಕ್ಷರಾದ ಅಶ್ರಫ್ ಬಾಖವಿ ಮುರ, ಉಪ್ಪಿನಂಗಡಿ ಖತೀಬರಾದ ನಝೀರ್ ಅಝ್ಹರಿ ಬೊಳ್ಮಿನಾರ್, ಅಧ್ಯಕ್ಷರಾದ ಮುಸ್ತಫ ಹಾಜಿ ಕೆಂಪಿ, ಯೂಸುಫ್ ಹಾಜಿ ಪೆದಮಲೆ, ಕೆ.ಎಸ್ ಅಬ್ದುಲ್ಲಾ ಕರಾಯ, ಹಾರಿಸ್ ಕೌಸರಿ ಕೋಲ್ಪೆ, ಜಬ್ಬಾರ್ ಮುಸ್ಲಿಯಾರ್ ಕರಾಯ, ಇ.ಕೆ. ಅಬ್ದುರ್ರಹ್ಮಾನ್ ಮುಸ್ಲಿಯಾರ್, ಮುಹಮ್ಮದ್ ಮುಸ್ಲಿಯಾರ್ ಜೋಗಿಬೆಟ್ಟು, ಝಖರಿಯಾ ಮುಸ್ಲಿಯಾರ್ ಆತೂರು, ಶುಕೂರ್ ದಾರಿಮಿ ಕರಾಯ, ಯೂಸುಫ್ ಹಾಜಿ ಎಚ್, ಅಬ್ದುರ್ರಹ್ಮಾನ್ ಅಡೆಕ್ಕಲ್, ಮುಹಮ್ಮದ್ ಕೂಟೇಲ್, ಮುಹಮ್ಮದ್ ಮೋನು ಕರ್ವೇಲು, ಫಾರೂಕ್ ಝಿಂದಗಿ, ಅಬ್ದುಲ್ ಅಝೀಝ್ ಕರಾವಳಿ, ಅಬ್ದುಲ್ ಸಮದ್ ಸಿಟಿ, ಯುಟಿ ಫಯಾಝ್, ಸ್ವಾದಿಕ್ ಕುಪ್ಪೆಟ್ಟಿ, ಹಾರಿಸ್ ಗಂಡಿಬಾಗಿಲು, ಹಾರಿಸ್ ಕರ್ವೇಲು ಸೇರಿದಂತೆ ವಲಯ ಕ್ಲಸ್ಟರ್ ನಾಯಕರು ಉಪಸ್ಥಿತರಿದ್ದರು.