ಕಡಬ, ಫೆ.18. ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ)ರವರನ್ನು ಅವಹೇಳನಕಾರಿ ಪದ ಬಳಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿರುವ ಮಧುಗಿರಿ ಮೋದಿ ಯಾನೆ ಅತುಲ್ ಕುಮಾರ್ ಎಂಬಾತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಸ್‌ಕೆಎಸ್ಸೆಸ್ಸೆಫ್ ವತಿಯಿಂದ ಕಡಬ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಸಾಮಾಜಿಕ ಜಾಲತಾಣದ ಮೂಲಕ ಮಧುಗಿರಿ ಮೋದಿ ಯಾನೆ ಅತುಲ್ ಕುಮಾರ್ ಎಂಬಾತ ಹಲವಾರು ಬಾರಿ ಅನಾವಶ್ಯಕ ಆರೋಪಗಳನ್ನು ಮಾಡಿ ಮುಸ್ಲಿಂ ಧರ್ಮಕ್ಕೆ ಅವಮಾನ ಮಾಡುತ್ತಾ ಬಂದಿರುತ್ತಾನೆ. ಇದೀಗ ಮುಂದುವರಿದು ಸರ್ವಧರ್ಮಿಯರೂ ಗೌರವಿಸುವ ವಿಶ್ವಶಾಂತಿಯ ಹರಿಕಾರ ಲೋಕ ಪ್ರವಾದಿ ಮುಹಮ್ಮದ್ ಪೈಗಂಬರ್‌ರ (ಸ.ಅ) ಬಗ್ಗೆ ತುಂಬಾ ಕೀಳು ಮಟ್ಟದ ಶಬ್ದ ಬಳಸಿ ಅವಾಚ್ಯವಾಗಿ ನಿಂದನೆಯನ್ನು ಮಾಡುವ ಮೂಲಕ ಸಮಾಜದಲ್ಲಿ ಭಾವೈಕ್ಯತೆಗೆ ಧಕ್ಕೆ ತಂದು ಕೋಮು ಪ್ರಚೋದನೆಗೆ ಪ್ರಯತ್ನಿಸುತ್ತಿದ್ದು, ಆರೋಪಿಯ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಕಡಬ ವಲಯ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ, ಆರ್‌ಟಿಜೆಎಂ ಅಧ್ಯಕ್ಷ ಹಾಜಿ ಎಸ್.ಅಬ್ದುಲ್ ಖಾದರ್, ಪ್ರಮುಖರಾದ ಕೆ.ಪಿ ಕಲೀಮುಲ್ಲಾ, ಹಾಜಿ ಕೆ.ಎಂ. ಹನೀಫ್, ಇಸ್ಮಾಯಿಲ್ ಕೆ.ಎಚ್. ಕಳಾರ, ಅಬ್ದುಲ್ ರಝಾಖ್ ರಾವುತರ್, ಅಬ್ದುಲ್ ರಹ್‌ಮಾನ್, ಎ.ಎಸ್ ಶರೀಫ್, ಕೆ.ಎಂ. ಫಾರೂಕ್, ಯೆಹ್ಯಾ ಮೂಲೆ, ಇಸ್ಮಾಯಿಲ್ ಡಿ, ಶಫಿಯುಲ್ಲಾ, ಫಯಾಜ್ ಕೆನರಾ, ಆದಂ ತಿಮರಡ್ಡ, ಇಕ್ಬಾಲ್ ಮುಸ್ಲಿಯಾರ್, ಆದಂ ಅಡ್ಕಾಡಿ, ಹಮೀದ್ ಮರ್ದಾಳ ಮೊದಲಾದವರು ಉಪಸ್ಥಿತರಿದ್ದರು.