ಬಂಟ್ವಾಳ: ರೈಲು ಹಳಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಬಂಟ್ವಾಳ, ಫೆ.18: ಇಲ್ಲಿನ ರೈಲು ಹಳಿಯ ಫುಟ್‌ಪಾತ್‌ನಲ್ಲಿ ಗಂಡಸಿನ ಮೃತದೇಹವೊಂದು ಪತ್ತೆಯಾಗಿದ್ದು, ಮೃತದೇಹವನ್ನು ರೈಲ್ವೆ ಪೊಲೀಸರು ವೆನ್ಲಾಕ್ ಆಸ್ಪತ್ರೆಯ ಶವಗಾರದಲ್ಲಿರಿಸಿದ್ದಾರೆ.

ಮೃತರನ್ನು ಬಿಸಿರೋಡಿನ ಬಿ.ಮೂಡ ಗ್ರಾಮದ ಅಲೆತ್ತೂರು ನಿವಾಸಿ ಮೋಹನ್ ಶೆಟ್ಟಿ (37) ಎಂದು ಗುರುತಿಸಲಾಗಿದೆ.

ಬಿ.ಸಿ.ರೋಡಿನ ರೈಲ್ವೆ ಮೇಲ್ಸೇತಯವೆಯ ಅಡಿ ಭಾಗದ ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಹೋಗುವ ವೇಳೆ ರೈಲು ಢಿಕ್ಕಿ ಹೊಡೆದು ಮೃತಪಟ್ಟಿದ್ದಾರೆಯೇ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದರೆಯೇ ಎಂಬುದು ತನಿಖೆಯ ಬಳಿಕ ತಿಳಿಯಬೇಕಾಗಿದೆ.

ಸುಮಾರು 7:30 ರ ವೇಳೆ ಬಿಸಿರೋಡಿನ ರೈಲ್ವೆ ಮೇಲ್ಸೇತುವೆಯ ಕೆಲಭಾಗದ ರೈಲು ಹಳಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಇದನ್ನು ಗಮನಿಸಿದ ಸಾರ್ವಜನಿಕರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ನಗರ ಪೊಲೀಸರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ಪೊಲೀಸರು ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ.

Also Read  ಕಡಬ: ಇಂದು (ಮಾ. 27) "ಶಟಲ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಕ್ಲಬ್" ವತಿಯಿಂದ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಡಬಲ್ಸ್ ಪಂದ್ಯಾವಳಿ

error: Content is protected !!
Scroll to Top