ಬೀಜಿಂಗ್, ಫೆ.18: ಕೊರಾನಾ ವೈರಸ್‌ಗೆ ಚೀನಾದ ವುಹಾನ್ ಆಸ್ಪತ್ರೆಯ ಮಾಲಕ ಲಿಯು ಝಿಮಿಂಗ್ ಸಾವನ್ನ್ನಪ್ಪಿರುವ ಬಗ್ಗೆ ಸರಕಾರಿ ಮಾಧ್ಯಮಗಳು ವರದಿ ಮಾಡಿದೆ.
ಚೀನಾದ ವುಹಾನ್ ಕೊರೊನಾ ವೈರಸ್‌ನ ಮೂಲ ಸ್ಥಳವಾಗಿದ್ದು, ದೇಶಾದ್ಯಂತ ಮರಣಮೃದಂಗ ಬಾರಿಸುತ್ತಿರುವ ನೂತನ ವೈರಸ್ ದಾಳಿಗೆ ನಿರ್ದೇಶಕ ಲಿಯು ಸಾವನ್ನಪ್ಪಿದ್ದಾರೆ. ಕೋವಿಡ್ 19 ವೈರಸ್ ಕಳೆದ ವರ್ಷ ವುಹಾನ್‌ನಲ್ಲಿ ಮೊದಲು ಪತ್ತೆಯಾಗಿರುವುದಾಗಿ ನಂಬಲಾಗಿದೆ.
ಈ ವೈರಸ್‌ಗೆ ಈವರೆಗೆ 1,900ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 72 ಸಾವಿರ ಮಂದಿ ವೈರಸ್‌ಗೆ ತುತ್ತಾಗಿದ್ದಾರೆ ಎಂದು ವರದಿ ತಿಳಿಸಿದೆ. ಲಿಯು ಝೀಮಿಂಗ್ ವುಚಾಂಗ್ ಆಸ್ಪತ್ರೆಯ ನಿರ್ದೇಶಕರಾಗಿದ್ದು, ಅವರನ್ನು ರಕ್ಷಿಸುವ ಎಲ್ಲಾ ಪ್ರಯತ್ನವು ವಿಫಲವಾಗಿರುವುದಾಗಿ ಸ್ಟೇಟ್ ಬ್ರಾಡ್ ಕಾಸ್ಟರ್ ಸಿಸಿಟಿವಿ ವರದಿ ಮಾಡಿದೆ.
ಈ ವರೆಗೆ ಕೊರೊನಾ ವೈರಸ್ ಗೆ ಆರು ಮಂದಿ ವೈದ್ಯಕೀಯ ಕ್ಷೇತ್ರದ ಜನರು ಸಾವನ್ನಪ್ಪಿದ್ದು, ಸಾವಿರಾರು ಮಂದಿಗೆ ವೈರಾಣು ಸೋಂಕು ತಲುಲಿರುವುದಾಗಿ ವರದಿ ತಿಳಿಸಿದೆ.