ರೆಂಜಿಲಾಡಿ; ರಾಷ್ಟ್ರೀಯ ಕ್ರೀಡಾಪಟು ಮೋಹನ್ ಕೆರೆಕೋಡಿ ಅವರಿಗೆ ಸಮ್ಮಾನ

(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ, ಫೆ.16. ರಾಷ್ಟ್ರಮಟ್ಟದ ಅತ್ಲೇಟಿಕ್ಸ್ ನಲ್ಲಿ ಚಿನ್ನದ ಪದಕ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಮೋಹನ್ ಕೆರೆಕೋಡಿ ಅವರನ್ನು ರೆಂಜಿಲಾಡಿ ಗೋಳಿಯಡ್ಕ ಪುಂಡಿಕ್‍ಮಾಡ ಶ್ರೀ ರಾಜನ್ ದೈವದ ನೇಮೋತ್ಸವದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು.

ರೆಂಜಿಲಾಡಿ ಬೀಡಿನ ಅರಸರಾದ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲರು ಸಾಧಕ ಕ್ರೀಡಾಪಟುವನ್ನು ಸಮ್ಮಾನಿಸಿ ಗೌರವಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಶುಭಹಾರೈಸಿದರು. ಪ್ರಮುಖರಾದ ರಾಜೇಂದ್ರ ಮಳಮಜಲು, ಭಾಸ್ಕರ ಗೌಡ ಎಳುವಾಳೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಉಮೇಶ್ ಶೆಟ್ಟಿ ಸಾಯಿರಾಂ ಸ್ವಾಗತಿಸಿ ವಂದಿಸಿದರು.

Also Read  ಆತೂರು: ಶ್ರೀ ಸದಾಶಿವ ಶ್ರೀ ಮಹಾಗಣಪತಿ ದೇವಳದ ಜಾತ್ರೋತ್ಸವ ದರ್ಶನ ಬಲಿ

error: Content is protected !!
Scroll to Top