ಕಡಬ: ಆರು ತಿಂಗಳ ಹಿಂದಿನ ಹಿಟ್ & ರನ್ ಪ್ರಕರಣ ಭೇದಿಸಿದ ಪೊಲೀಸರು ➤ ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲರ ಕಾರು ವಶಕ್ಕೆ



(ನ್ಯೂಸ್ ಕಡಬ) newskadaba.com ಕಡಬ, ಫೆ.14. ಆರು ತಿಂಗಳ ಹಿಂದೆ ಮಹಿಳೆಯೊಬ್ಬರಿಗೆ ಢಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರನ್ನು ಪತ್ತೆಹಚ್ಚಿರುವ ಕಡಬ ಪೊಲೀಸರು ಹಳೆಯ ಪ್ರಕರಣವನ್ನು ಹೊರಹಾಕಿದ್ದಾರೆ.





2019 ರ ಸೆಪ್ಟೆಂಬರ್ 09ರಂದು ಸುಬ್ರಹ್ಮಣ್ಯ- ಕಡಬ ರಾಜ್ಯ ಹೆದ್ದಾರಿಯ ನೆಟ್ಟಣ ಎಂಬಲ್ಲಿ ಇನ್ನೋವಾ ಕಾರೊಂದು ಮಹಿಳೆಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ತೀವೃವಾಗಿ ಗಾಯಗೊಂಡಿದ್ದ ಮಹಿಳೆ ಸುಮತಿ (48) ಎಂಬವರು ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದರು. ಇದೀಗ ಆರು ತಿಂಗಳುಗಳ ನಂತರ ವಾಹನವನ್ನು ಪೋಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದು, ಈ ಕಾರು ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಎಂಬವರಿಗೆ ಸೇರಿದ್ದಾಗಿದೆ ಎಂದು ಕಡಬ ಪೋಲೀಸರು ತಿಳಿಸಿದ್ದಾರೆ. ಮಹಿಳೆಗೆ ಢಿಕ್ಕಿ ಹೊಡೆದು ಪರಾರಿಯಾದ ಕಾರಿನ ಬಗ್ಗೆ ಸಿ.ಸಿ ಕ್ಯಾಮರಾ ದೃಶ್ಯಗಳನ್ನು ಆಧರಿಸಿ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ.






error: Content is protected !!
Scroll to Top