ಕಡಬದಾದ್ಯಂತ ತೀವ್ರಗೊಂಡ ವಿದ್ಯುತ್ ಸಮಸ್ಯೆ! ಜನಪ್ರತಿನಿಧಿಗಳು ಮೌನ! ಕೃಷಿಗೂ ನೀರಿಲ್ಲದೆ ಪರದಾಟ

ವರದಿ: ವಿಜಯಕುಮಾರ್ ಕಡಬ

ಕಡಬ: ಕರೆಂಟ್ ಯಾವಾಗ ಬರುತ್ತದೆ? ಕರೆಂಟ್ ಯಾವಾಗ ಬರುತ್ತದೆ? ಇದು ಇತ್ತೀಚ್ಚಿನ ಕೆಲ ದಿನಗಳಿಂದ ಕಡಬ ತಾಲೂಕಿನದ್ಯಂತ ದಾದ್ಯಂತ ಎಲ್ಲ ಸಾರ್ವಜನಿಕರ ಬಾಯಲ್ಲಿ ಬರುವ ಪ್ರಶ್ನೆ, ಆದರೆ ಕರೆಂಟ್ ಯಾವಾಗ ಬರುತ್ತದೆಯೋ, ಬಂದ ಕರೆಂಟ್ ಯಾವಾಗ ಹೋಗುತ್ತದೆಯೋ ಎಂದು ಗೊತ್ತಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿದ್ಯುತ್ ಅಭಾವದಿಂದ ಕೃಷಿಕರು, ವಿದ್ಯಾರ್ಥಿಗಳು, ಉದ್ದೀಮೆದಾರರು ಸೇರಿದಂತೆ ಸಾರ್ವಜನಿಕರು ಹೈರಾಣನಾಗಿದ್ದಾರೆ.
ಈಗಾಗಲೇ ವಾರದಲ್ಲಿ ಎರಡು ಮೂರು ದಿನ ಹಗಲಿನ ವೇಳೆಯಲ್ಲಿ ವಿದ್ಯುತ್ ಮಾರ್ಗಗಳ ದುರಸ್ತಿಗೆ ವಿದ್ಯುತ್ ಕಡಿತ ಮಾಡುತ್ತಿದ್ದು ಇದರಿಂದ ವಾರದ ನಾಲ್ಕೈದು ದಿನ ಈ ವಿದ್ಯುತ್ ಸರಬರಾಜಿನ ಸಮತೋಲನ ತಪ್ಪಿ ಹೋಗಿ ಓವರ್ ಲೋಡ್, ಜಂಪರ್ ಕಟ್ ಮೊದಲಾದ ಸಮಸ್ಯೆಗಳು ಉದ್ಬವವಾಗುತ್ತದೆ, ಈ ಸಮಸ್ಯೆಗಳನ್ನು ಹುಡುಕಿ ಸರಿ ಮಾಡುವ ವೇಳೆ ಆ ಭಾಗಕ್ಕೆ ಕನಿಷ್ಟ ಎರಡು ಗಂಟೆ ಕರೆಂಟಿಲ್ಲ, ಒಂದೆಡೆ ದಿನದ ಪವರ್ ಕಟ್, ಮತ್ತೊಂದೆಡೆ ವಿದ್ಯುತ್ ಮಾರ್ಗದಲ್ಲಿ ಉಂಟಾಗುವ ಅಡಚನೆಗಳಿಂದ ಜನರು ಮಾತ್ರ ತೊಂದರೆ ಅನುಭವಿಸುತ್ತಲೆ ಇದ್ದಾರೆ. ಅಧಿಕಾರಿಗಳ ಪ್ರಕಾರ ಅಷ್ಟೆನು ವಿದ್ಯುತ್ ಸಮಸ್ಯೆ ಕಾಣುವುದಿಲ್ಲ, ಯಾಕೆಂದರೆ ಅವರು ನೀಡುವ ಉತ್ತರ ಏನೆಂದರೆ, ದಿನದ 24 ಗಂಟೆಯಲ್ಲಿ 8 ಗಂಟೆ ತ್ರಿಪೇಸ್, 8 ಗಂಟೆ ಸಿಂಗಲ್ ಪೇಸ್, 8 ಗಂಟೆ ಲೋಡ್ ಶೆಡ್ಡಿಂಗ್ ಅಷ್ಟೆ, ಆದರೆ ವಾಸ್ತವವಾಗಿ ಈ ರೀತಿ ವಿದ್ಯುತ್ ಸರಬರಾಜು ಇರುವುದಿಲ್ಲ, ಲೋ ವೋಲ್ಟೆಜ್ ಸಮಸ್ಯೆ ಹಾಗೂ ಕೆಲವೊಂದು ತಾಂತ್ರಿಕ ಅಡಚನೆಗಳಿಂದ ಮತ್ತು ನಾನಾ ಕಾರಣಗಳಿಂದ ವಿದ್ಯುತ್ ಮಾತ್ರ ಮಾಯವಾಗಿದೆ.

ಸರಬರಾಜು ಕಡಿಮೆ, ಬೇಡಿಕೆ ಹೆಚ್ಚು:

ಈ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ ಸುಧಾರಣೆಯಾಗದ ನಮ್ಮ ಸಬ್ ಸ್ಟೇಷನ್‍ಗಳು, ಗ್ರಾಹಕ ಹೆಚ್ಚಾಗುತ್ತಲೇ ಇದ್ದರೂ ಸರಬರಾಜು ಆಗುತ್ತಿರುವ ವಿದ್ಯುತ್ ಕಡಿಮೆ. ಕಡಬ ಸಬ್ ಸ್ಟೇಷನ್‍ಗೆ ಸುಮಾರು 35 ಮೆಘವ್ಯಾಟ್ ಬೇಡಿಕೆ ಇದ್ದರೂ, ಸರಬರಾಜು ಆಗುತ್ತಿರುವುದು ಮಾತ್ರ 20 ಮೆಘವ್ಯಾಟ್ ಇದರಿಂದ ಗ್ರಾಹಕನಿಗೆ ಗುಣಮಟ್ಟದ ವಿದ್ಯುತ್ ಕೊಡುವುದು ಅಸಾಧ್ಯವಾಗುತ್ತಿದೆ. ಈಗಾಗಲೇ ಪುತ್ತೂರು ವಿಭಾಗದಿಂದ ಸವಣೂರು, ಕಡಬ, ನೆಲ್ಯಾಡಿ, ಸುಬ್ರಹ್ಮಣ್ಯ ಸಬ್ ಡಿವಿಷನ್‍ಗಳಿಗೆ ಏಕ ಮಾರ್ಗದಲ್ಲಿ ಸರಬರಾಜು ಆಗುತ್ತಿರುವುದು ಈ ಅನಿಯಮಿತ ವಿದ್ಯುತ್ ಸರಬರಾಜಿಗೆ ಕಾರಣವಾಗಿದೆ. ಪುತ್ತೂರು ವಿಭಾಗದಿಂದ ಸವಣೂರು, ಹಾಗೂ ನೆಲ್ಯಾಡಿ ವಿದ್ಯುತ್ ಮಾರ್ಗವನ್ನು ಕಡಬದಿಂದ ಬೇರ್ಪಡಿಸಿದಾಗ ಲೋ ವೋಲ್ಟೆಜ್ ಸಮಸ್ಯೆಗಳು ಸರಿಯಾಗಬಹುದು.

ಮಾಡವು ಸ್ಟೇಷನ್ ಕಾಮಗಾರಿ ನಡೆದಿಲ್ಲ!
ಆಲಂಕಾರು ಸಮಸ್ಯೆ ಇನ್ನೂ ಮುಗಿದಿಲ್ಲ!

ವಿದ್ಯುತ್ ಸಮಸ್ಯೆಯ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳಲ್ಲಿ ಪ್ರಶ್ನೆ ಕೇಳಿದರೆ ಸುಲಭದಲ್ಲಿ ಸಿಗುವ ಉತ್ತರ ಎಂದರೆ, “ಮಾಡವು ಸ್ಟೇಷನ್ ಕಾಮಗಾರಿ ಮುಗಿದಿಲ್ಲ, ಅದು ಮುಗಿದರೆ ಕಡಬ ಭಾಗದ ಅರ್ಧ ಸಮಸ್ಯೆ ಮುಗಿಯುತ್ತದೆ ಮತ್ತು ಆಲಂಕಾರು ವಿದ್ಯುತ್ ಮಾರ್ಗಕ್ಕೆ ಇರುವ ತಡೆ ಸಮಸ್ಯೆ ಪರಿಹಾರಗೊಂಡರೆ ಪೂರ್ತಿ ಸಮಸ್ಯೆ ಪರಿಹಾರ ಆಗುತ್ತದೆ” ಎಂದು ಈ ಉತ್ತರವನ್ನು ಕೇಳಿ ಕೇಳಿ ಈ ಭಾಗದ ಜನ ರೋಸಿ ಹೋಗಿದ್ದಾರೆ, ಸಮಸ್ಯೆಯನ್ನು ಬಗೆಹರಿಸಬೇಕಾದವರು ಯಾರು? ಜನಪ್ರತಿನಿಧಿಗಳೊ, ಅಧಿಕಾರಿಗಳೋ ಅಥಾವ ಸಾರ್ವಜನಿಕರೋ ಎಂಬ ಪ್ರಶ್ನೆಗಳು ಮೂಡುತ್ತದೆ,

Also Read  ಕಾರು ಹಾಗೂ ಟಿಪ್ಪರ್ ನಡುವೆ ಢಿಕ್ಕಿ ➤ ಆರು ಮಂದಿಗೆ ಗಾಯ

ಕೃಷಿಗೂ ನೀರಿಲ್ಲದೆ ಪರದಾಟ:
ಈ ಎಲ್ಲ ಸಮಸ್ಯೆಗಳಿಂದ ಕೃಷಿಕ ಮಾತ್ರ ಹೊಡೆತ ತಿನ್ನುತ್ತಲೇ ಇದ್ದಾನೆ, ಒಂದೆಡೆ ವರ್ಷ ವರ್ಷ ಕೃಷಿಗೆ ಭಾದಿಸುವ ರೋಗಗಳು, ಇನ್ನೊಂದೆಡೆ ವಿದ್ಯುತ್ ಸಮಸ್ಯೆಯಿಂದ ಕೃಷಿಗೆ ನೀರು ಹಾಕಲು ಆಗದಿರುವುದು ಇದರಿಂದ ರೈತನೂ ಈವ್ರ ತೊಂದರೆಗೆ ಒಳಗಾಗಿದ್ದಾರೆ. ತ್ರೀ ಪೇಸ್ ವಿದ್ಯುತ್ ಇನದಲ್ಲಿ 8 ಗಂಟೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ, ಸರಿಯಾಗಿ 2 ಗಂಟೆಯೂ ಪಂಪ್ ಚಾಲೂ ಆಗದ ಉದಾಹರಣೆಗಳೂ ಇದೆ. ಇತ್ತ ಉದ್ಯಮಿಗಳ ಕಥೆಯೂ ಅಷ್ಟೆ, ಇತ್ತೀಚ್ಚಿನ ದಿನಗಳಲ್ಲಿ ವ್ಯಾಪಾರ ವ್ಯವಹಾರ ಕುಸಿತ ಒಂದೆಡೆಯಾದರೆ ದಿನ ನಿತ್ಯ ಈ ವಿದ್ಯುತ್ ಸಮಸ್ಯೆಯೂ ಅವರನ್ನು ತೊಂದರೆಗೆ ಒಳಪಡಿಸಿದೆ, ಇನ್ನೂ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ರಾರಂಭವಾಗಿರುವುದರಿಂದ ಮುಖ್ಯವಾಗಿ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಈ ಸಮಸ್ಯೆ ಪ್ರಭಾವ ಬೀರಿದೆ.


ಶಾಸಕರ ಇಚ್ಚಾಶಕ್ತಿ ಕೊರತೆ-ಪಿ.ಪಿ.ವರ್ಗೀಸ್

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಇರುವಷ್ಟು ವಿದ್ಯುತ್ ಸಮಸ್ಯೆ ಬೇರೆ ಎಲ್ಲಿಯೂ ಇಲ್ಲ, ಇದಕ್ಕೆ ಮೂಲ ಕಾರಣ ಇಲ್ಲಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಾಸಕ ಎಸ್. ಅಂಗಾರ ಅವರ ಇಚ್ಚಾಶಕ್ತಿಯ ಕೊರತೆಯೇ ಕಾರಣ ಎಂದು ಕಡಬ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಅವರು ಹೇಳಿದ್ದಾರೆ, ಅವರು ಪ್ರತಿಕ್ರಿಯೆ ನೀಡಿ, ವಿದ್ಯುತ್ ಸಮಸ್ಯೆಗಳನ್ನು ಶಾಸಕರು, ಸರಕಾರ ಮಟ್ಟದಲ್ಲಿ ಬಗೆಹರಿಸಬೇಕಾಗಿದ್ದು ಅದು ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳಿಂದ ಸಾಧ್ಯವಾಗುವುದಿಲ್ಲ, ಶಾಸಕರು ಅಲಂಕಾರು ಮೂಲಕ ಹಾದು ಹೋಗುವ ಹೊಸ ವಿದ್ಯುತ್ ಮಾರ್ಗದ ಸಮಸ್ಯೆಯನ್ನು ಮಾತುಕತೆ ನಡೆಸಿ ಪರಿಹಾರ ಮಾಡಿಲ್ಲ, ಕೂಡಲೇ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಿಕೊಡಬೇಕೆಂದು ಅವರು ಆಗ್ರಹಿಸಿದರು.

ನೆಲ್ಯಾಡಿ ಭಾಗಲ್ಲಿಯೂ ತೀವ್ರ ಸಮಸ್ಯೆ-ಸರ್ವೋತ್ತಮ ಗೌಡ

ವಿದ್ಯುತ್ ಸಮಸ್ಯೆ ನೆಲ್ಯಾಡಿ ಭಾಗದಲ್ಲಿ ತೀವ್ರವಾಗಿಯೂ ಇದೆ, ಕೃಷಿಗೂ ನೀರಿಲ್ಲದಂತಾಗಿದೆ, ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವಲ್ಲಿ ಕ್ಷೇತ್ರದ ಶಾಸಕರು ವಿಫಲರಾಗಿದ್ದಾರೆ, ದಿನದ ಹೆಚ್ಚು ಗಂಟೆ ವಿದ್ಯುತ್ ಇರುವುದಿಲ್ಲ, ಆದರೆ ವಿದ್ಯುತ್ ಇದ್ದರೂ ಗುಣಮಟ್ಟದ ವಿದ್ಯುತ್ ಇರುವುದಿಲ್ಲ, ಲೋ ವೋಲ್ಟೆಜ್ ಹಾಗೂ ಹೈ ವೋಲ್ಟೆಜ್ ಸಮಸ್ಯೆಯಿಂದ ಗ್ರಾಹಕನಿಗೆ ಅಧಿಕ ವಿದ್ಯುತ್ ಬಿಲ್ ಬರುತ್ತಿದೆ, ನೆಲ್ಯಾಡಿ ಸಬ್ ಡಿವಿಷನ್‍ಗೆ ಪ್ರತ್ಯೇಕ ವಿದ್ಯುತ್ ಮಾರ್ಗವನ್ನು ಅಳವಡಿಸಿ ಕೂಡಲೇ ಈ ಭಾಗದ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

10 ದಿನಗಳಲ್ಲಿ ಸಮಸ್ಯೆ ಸುಧಾರಣೆ-ಇ.ಇ.

Also Read  ಗೋಣಿಚೀಲದಲ್ಲಿದ್ದ ಮಹಿಳೆಯ ಮೃತದೇಹವನ್ನು ಎಳೆದಾಡಿ ತಿನ್ನುತ್ತಿದ್ದ ಬೀದಿನಾಯಿಗಳು..! ➤ ಮನಕಲುಕುವ ದೃಶ್ಯ

ವಿದ್ಯುತ್ ಸಮಸ್ಯೆಯ ಬಗ್ಗೆ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಅವರು ಪ್ರತಿಕ್ರಿಯೆ ನೀಡಿ, ಈಗಾಗಲೇ ಪುತ್ತೂರು ವಿಭಾಗದಿಂದ ಸವಣೂರು, ಕಡಬ, ನೆಲ್ಯಾಡಿ,ಸುಬ್ರಹ್ಮಣ್ಯ ಸಬ್ ಸ್ಟೇಷನ್‍ಗಳಿಗೆ ಏಕ ಮಾರ್ಗದ ಮೂಲಕ ವಿದ್ಯುತ್ ಸರಬರಾಜು ಆಗುತ್ತಿರುವುದರಿಂದ ಓವರ್ ಲೋಡ್ ಸಮಸ್ಯೆಗಳು ಆಗುತ್ತಿದೆ, ಆದರೆ 10 ದಿನಗಳಲ್ಲಿ ಸವನೂರು ಸಬ್ ಸ್ಟೇಷನ್‍ನ್ನು ಈ ಏಕ ಮಾರ್ಗದಿಂದ ಬೇರ್ಪಡಿಸುವ ಕಾಮಗಾರಿ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಕಡಬ ಭಾಗದಲ್ಲಿ ಸ್ವಲ್ಪ ಮಟ್ಟಿನ ವಿದ್ಯುತ್ ಸಮಸ್ಯೆ ಸರಿಯಾಗಲಿದೆ, ಅಲ್ಲದೆ ಮಾಡವು ಸ್ಟೇಷನ್‍ನ ಕಾಮಗಾರಿಯನ್ನು ಒಂದು ತಿಂಗಳೊಳಗೆ ಬಿಟ್ಟು ಕೊಡಬೇಕು ಎಂದು ಈಗಾಗಲೇ ಕೇಳಿಕೊಂಡಿದ್ದೆವೆ, ಮತ್ತು ಆಲಂಕಾರು ಸರ್ವೆ ಕಾರ್ಯ ಆಗಿ ಲೈನ್ ಎಳೆದರೆ ಕಡಬ ಹಾಗೂ ನೆಲ್ಯಾಡಿ ಸಬ್ ಸ್ಟೇಷನ್‍ಗಳನ್ನು ಬೇರ್ಪಡಿಸಲು ಆಗುತ್ತದೆ, ಈ ಕಾರ್ಯಕ್ಕೆ ತಡೆ ಇರುವುದರಿಂದ ನಿಗದಿತ ಸಮಯ ಹೇಳಲು ಸಾಧ್ಯವಿಲ್ಲ, ಇಲಾಖೆಯಿಂದ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ನಾವು ಪ್ರಯತ್ನ ಮಾಡುತ್ತಿದ್ದು ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ತೊಂದರೆ ಆಗುತ್ತಿದೆ, ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ವಿನಂತಿಸಿದ್ದಾರೆ.

ಇನ್ನು ಮುಂದೆ ದಿನ ಪೂರ್ತಿ ವಿದ್ಯುತ್ ನಿಲುಗಡೆ ಇಲ್ಲ-ಎ.ಇ.ಇ
ವಿದ್ಯುತ್ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದ ಕಡಬ ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಜಿ ಕುಮಾರ್, ಈಗಾಗಲೇ ನಾವು 8 ಗಂಟೆ ತ್ರಿಪೇಸ್, 8 ಗಂಟೆ ಸಿಂಗಲ್ ಪೇಸ್, ಹಾಗೂ 8 ಗಂಟೆ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದೆವೆ, ಆದರೆ ಕೆಲವೇ ದಿನಗಳಲ್ಲಿ ಸವಣೂರು ಉಪ ವಿಭಾಗವನ್ನು ಕಡಬದಿಂದ ಬೇರ್ಪಡಿಸುವ ಕಾರ್ಯ ಮುಗಿಯಲಿದೆ, ಅದು ಚಾರ್ಜ್ ಆದ ಬಳಿಕ ಸ್ವಲ್ಪ ಮಟ್ಟಿನ ಸಮಸ್ಯೆ ಬಗೆಹರಿಯಲಿದೆ, ಅಲ್ಲದೆ ಕಡಬ ಉಪ ವಿಭಾಗದಲ್ಲಿ ಹೆಚ್ಚುವರಿಯಾಗಿ 12.5 ಎಂ.ವಿ.ಎ ಪರಿವರ್ತಕ ಅಳವಡಿಸುವ ಕೆಲಸ ಆಗುತ್ತಿದ್ದು ಪೂರ್ಣಗೊಂಡ ಬಳಿಕ ಸಮಸ್ಯೆ ಇನ್ನಷ್ಟು ಸುಧಾರಿಸಲಿದೆ, ಮುಂದಿನ ದಿನಗಳಲ್ಲಿ ಲೋಡ್ ಶೆಡ್ಡಿಂಗ್ ಅವಧಿ ಕಡಿಮೆ ಮಾಡುವ ಬಗ್ಗೆ ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದ್ದಾರೆ.

ದಯವಿಟ್ಟು ಜನಪ್ರತಿನಿಧಿಗಳೇ ವಿದ್ಯುತ್ ಸಮಸ್ಯೆ ಬಗೆಹರಿಸಿ
ಕಡಬದ ವಿದ್ಯುತ್ ಸಮಸ್ಯೆ ಬಗ್ಗೆ ಹೇಳತೀರದು, ಕಡಬ ಪರಿಸರದ ಜನ ಕಳೆದ ಕೆಲ ತಿಂಗಳುಗಳಿಂದ ಪದೇ ಪದೇ ವಿದ್ಯುತ್ ಹಾಗೂ ಲೋ ವೋಲ್ಟೆಜ್ ಸಮಸ್ಯೆಯಿಂದ ತತ್ತರಿಸಿ ಹೋಗಿದ್ದಾರೆ. ಪದೇ ಪದೇ ವಿದ್ಯುತ್ ಕೈಕೊಡುವುದರಿಂದ ಯಾವುದೇ ಉದ್ದಿಮೆಗಳು ನಡೆಯುವುದಿಲ್ಲ, ಈಗಾಗಲೇ ಮಕ್ಕಳಿಗೆ ಪರೀಕ್ಷೆಗಳು ಪ್ರಾರಂಭವಾಗಿರುವುದರಿಂದ ಅವರ ಶಿಕ್ಷಣಕ್ಕೆ ತೊಂದರೆಯಾಗುತ್ತದೆ, ದಯವಿಟ್ಟು ಜನಪ್ರತಿನಿಧಿಗಳು ಸಮಸ್ಯೆಗೆ ಪರಿಹಾರ ಕಲ್ಪಿಸಿ, ಭರವಸೆಗಳಿಂದ ಬಲ್ಬು ಉರಿಯುವುದಿಲ್ಲ, ಆರೋಪಗಳಿಂದ ಪ್ಯಾನ್ ತಿರುಗುವುದಿಲ್ಲ, ಘೋಷಣೆ, ಭಾಷಣಗಳಿಂದ ಪಂಪು ಚಾಲೂ ಆಗುವುದಿಲ್ಲ, ಮಕ್ಕಳ ಪರೀಕ್ಷೆ ಸಮಯದಲ್ಲಿ ಕರೆಂಟ್ ತೆಗೆದರೆ ನಿಮ್ಮನ್ನು ಕ್ಷಮಿಸುವುದಿಲ್ಲ.

Also Read  ದೇಶದಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚಳ- ವರದಿ

ಜಿನಿತ್ ಕುಮಾರ್ ಶ್ರೀ ದೇವಿ ಗಿಪ್ಟ್ ಸೆಂಟರ್ ಮರ್ದಾಳ

 

ಎರಡು ದಿನದೊಳಗೆ ಅಧಿಕಾರಿಗಳ
ಸಭೆ ನಡೆಸುತ್ತೇನೆ-ಎಸ್. ಅಂಗಾರ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಳ್ಯ ಶಾಸಕ ಎಸ್. ಅಂಗಾರ ಅವರು ಕಡಬ ಭಾಗದಲ್ಲಿನ ವಿದ್ಯುತ್ ಸಮಸ್ಯೆಗೆ ಸಂಬಂಧಿಸಿ ಕೆಲವೊಂದು ಶಾಶ್ವತ ಪರಿಹಾರಕ್ಕೆ ಪ್ರಯತ್ನಗಳನ್ನು ಮಾಡುತ್ತಿದ್ದು ಎರಡು ದಿನದೊಳಗೆ ಅಧಿಕಾರಿಗಳ ಸಭೆ ಕರೆದು ಸಮಸ್ಯೆಯನ್ನು ಪರಿಹರಿಸಲು ಕ್ರಮಗಳನ್ನು ಕೈಗೊಳ್ಳುತ್ತೇನೆ. ಕಡಬ, ನೆಲ್ಯಾಡಿ, ಸುಬ್ರಹ್ಮಣ್ಯ ಭಾಗದಲ್ಲಿನ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತೇನೆ, ಜಿ.ಪಂ. ಸದಸ್ಯರ ಆರೋಪಕ್ಕೆ ಉತ್ತರಿಸಲು ನಿರಾಕರಿಸಿದರು.

error: Content is protected !!
Scroll to Top