ಪಂಪ್ ವೆಲ್ ಫ್ಲೈಒವರ್ ನಿಂದ ಕೆಳಗೆ ಬಿದ್ದ ಕಾರು ➤ ಓರ್ವ ಮೃತ್ಯು, ಇಬ್ಬರು ಗಂಭೀರ



(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.08. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಂಪ್ ವೆಲ್ ಮೇಲ್ಸೇತುವೆಯಿಂದ ಕೆಳಕ್ಕೆ ಬಿದ್ದ ಘಟನೆ ಶನಿವಾರ ಸಂಜೆ ನಡೆದಿದೆ.





ಘಟನೆಯಲ್ಲಿ ಪ್ರಯಾಣಿಕರೋರ್ವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು ಸ್ವಾಗತ್ ಗ್ಯಾರೇಜ್‌ನ ಮುಖ್ಯಸ್ಥ ಪ್ರವೀಣ್ ಫೆರ್ನಾಂಡಿಸ್ (45) ಎಂದು ಗುರುತಿಸಲಾಗಿದೆ. ನಂತೂರಿನಿಂದ ಉಳ್ಳಾಲ ಕಡೆಗೆ ತೆರಳುತ್ತಿದ್ದ ಮಾರುತಿ ಆಲ್ಟೋ 800 ಕಾರು ಚಾಲಕನ ನಿಯಂತ್ರಣ ತಪ್ಪಿ ಪಂಪ್ವೆಲ್ ಫ್ಲೈಓವರ್ ಕೊನೆಯಲ್ಲಿ ವಿರುದ್ದ ದಿಕ್ಕಿನಿಂದ ಆಗಮಿಸುತ್ತಿದ್ದ ಡಸ್ಟರ್ ಕಾರಿಗೆ ಢಿಕ್ಕಿ ಹೊಡೆದು ಫ್ಲೈಓವರ್ ನಿಂದ ಸರ್ವೀಸ್ ರಸ್ತೆಗೆ ಬಿದ್ದು ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಡಸ್ಟರ್ ಕಾರಿನಲ್ಲಿದ್ದ ಪ್ರವೀಣ್ ಮೃತಪಟ್ಟಿದ್ದು, ಆಲ್ಟೋ 800 ಕಾರಿನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.






error: Content is protected !!
Scroll to Top