ಕಡಬ: ನಾದಿನಿಯ ಮೇಲೆ ಆ್ಯಸಿಡ್ ಎರಚಿದ ಪ್ರಕರಣ ➤ ಕರ್ತವ್ಯ ಲೋಪ ಎಸಗಿದ ಎಎಸ್ಐ ಚಂದ್ರಶೇಖರ್ ಅಮಾನತು

ಆರೋಪಿ ಜಯಾನಂದ

(ನ್ಯೂಸ್ ಕಡಬ) newskadaba.com ಕಡಬ, ಫೆ‌.08. ಮಹಿಳೆಯೋರ್ವರ ಮುಖಕ್ಕೆ ಆಕೆಯ ಬಾವ ಆ್ಯಸಿಡ್ ಎರಚಿದ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಕಡಬ ಠಾಣಾ ಎಎಸೈ ಯನ್ನು ಅಮಾನತುಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್ ಆದೇಶಿಸಿದ್ದಾರೆ.

ಕೋಡಿಂಬಾಳ ಗ್ರಾಮದ ಕೊಠಾರಿ ನಿವಾಸಿ ಜಯಾನಂದ ಕೊಠಾರಿ(55) ಎಂಬಾತ ತನ್ನ ತಮ್ಮನ ಪತ್ನಿ ವಿಧವೆ ಸ್ವಪ್ನಾ(35) ಹಾಗೂ ಆಕೆಯ ಹೆಣ್ಣುಮಗಳ ಮುಖಕ್ಕೆ ಆ್ಯಸಿಡ್ ಎರಚಿದ್ದ ವೇಳೆ ಕಡಬ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ ಚಂದ್ರಶೇಖರ್ ಎಂಬವರು ಕರ್ತವ್ಯ ದೂರು ಸ್ವೀಕರಿಸದೆ ಕರ್ತವ್ಯ ಲೋಪ ಎಸಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಸಿದ ಪುತ್ತೂರು ಡಿವೈಎಸ್ಪಿ ದಿನಕರ್ ಶೆಟ್ಟಿಯವರು ನೀಡಿದ ವರದಿಯನ್ನು ಆಧರಿಸಿ ದಕ್ಷಿಣ ಕನ್ನಡ ಎಸ್ಪಿ ಲಕ್ಷ್ಮೀ ಪ್ರಸಾದ್ ರವರು ಎಎಸ್ಐ ಚಂದ್ರಶೇಖರ್ ರವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

Also Read  ಚಿಕ್ಕಪ್ಪನನ್ನೇ ಮದುವೆಯಾದ ಮಗಳು- ಗ್ರಾಮಸ್ಥರಿಂದ ತೀವ್ರ ಆಕ್ರೋಶ

error: Content is protected !!
Scroll to Top