ಬೀಜಿಂಗ್, ಜ.28: ವಿಶ್ವದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿರುವ ಕೊರೊನಾ ವೈರಸ್ ತನ್ನ ಕರಾಳ ಬೇಟೆಯನ್ನು ಮತ್ತಷ್ಟು ಹೆಚ್ಚಿಸಿದೆ. ಚೀನಾದಲ್ಲಿ ಕೊರೊನಾ ವೈರಸ್ ಗೆ ಬಲಿಯಾದವರ ಸಂಖ್ಯೆ ಸುಮಾರು 106ಕ್ಕೆ ತಲುಪಿದೆ ಎಂದು ವರದಿಯಾಗಿದೆ.
ಚೀನಾದ ಹುಬೈ ಪ್ರಾಂತ್ಯದಲ್ಲಿ ಕಳೆದ ರಾತ್ರಿ ಈ ಮಾರಣಾಂತಿಕ ವೈರಸ್ ಗೆ 24 ಜನರು ಬಲಿಯಾಗಿದ್ದಾರೆ. ಚೀನಾದಲ್ಲಿ ಕೊರೊನಾ ವೈರಸ್ ಗೆ ಬಲಿಯಾದವರ ಸಂಖ್ಯೆ ಏರುತ್ತಲೇ ಇದೆ. ಚೀನಾದಲ್ಲಿ ಈವರೆಗೆ ಸುಮಾರು 106 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ದೇಶದಲ್ಲಿ ಸುಮಾರು 4000 ಕ್ಕೂ ಹೆಚ್ಚು ಜನರಿಗೆ ಈ ಮಾರಣಾಂತಿಕ ವೈರಸ್ ತಗುಲಿದೆ. ಹುಬೈ ಪ್ರಾಂತ್ಯದಲ್ಲಿ ಮಾರಣಾಂತಿಕ ವೈರಸ್ ದಾಳಿಗೆ ಒಳಗಾದ 1300ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿದೆ. ಭಾರತದ ಕೇರಳದಲ್ಲಿ ನೂರು ಮಂದಿಯನ್ನು ನಿಗಾ ಸ್ಥಿತಿಯಲ್ಲಿಡಲಾಗಿದೆ. ಜೊತೆಗೆ ಭಾರತದಲ್ಲಿ ಈ ವೈರಸ್ ಹಬ್ಬದಂತೆ ಭಾರಿ ಮುನ್ನೆಚ್ಚರಿಕಾ ವ್ಯವಸ್ಥೆ ಮಾಡಲಾಗುತ್ತಿದೆ.