ಬಾಗ್ದಾದ್: ಅಮೆರಿಕಾ ರಾಯಬಾರಿ ಕಚೇರಿ ಬಳಿ ಅಪ್ಪಳಿಸಿದ ಮೂರು ರಾಕೆಟ್

ಬಾಗ್ದಾದ್, ಜ.21: ಇರಾಕ್‌ನ ಅತೀ ಭದ್ರತೆ ಇರುವ ಹಸಿರು ವಲಯ ಬಾಗ್ದಾದ್ ನಲ್ಲಿರುವ ಅಮೆರಿಕಾ ರಾಯಭಾರ ಕಚೇರಿಯ ಸಮೀಪವೇ 3 ರಾಕೆಟ್ ಗಳು ಅಪ್ಪಳಿಸಿವೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಉನ್ನತ ಭದ್ರತಾ ಸ್ಥಳವಾದ ಇರಾಕ್ ರಾಜಧಾನಿ ಹಸಿರು ವಲಯಕ್ಕೆ ಈ ರಾಕೆಟ್ ಗಳು ಅಪ್ಪಳಿಸಿದ್ದು ಆದರೆ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಆ ಮೂಲಕ ಮಧ್ಯಪ್ರಾಚ್ಯದಲ್ಲಿ ಅವರಿಸಿರುವ ಯುದ್ಧ ಭೀತಿಯನ್ನು ಮತ್ತಷ್ಟು ಹೆಚ್ಚಿಸಿವೆ.

ಅಮೇರಿಕಾ ರಾಯಭಾರ ಕಚೇರಿ ಸೇರಿದಂತೆ, ಹಲವು ದೇಶಗಳ ರಾಯಭಾರೀ ಕಚೇರಿಯನ್ನೊಳಗೊಂಡ ಹಸಿರುವ ವಲಯಕ್ಕೆ ಈ ಕತ್ಯುಷಾ ರಾಕೆಟ್ ಗಳು ಬಿದ್ದಿವೆ ಎಂದು ಮಾಧ್ಯಮದ ವರದಿ ಖಚಿತಪಡಿಸಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿಕಾ  ಇರಾನ್ ಇತ್ತೀಚಿನ ದಿನಗಳಲ್ಲಿ ಹಸಿರು ವಲಯದ ಮೇಲೆ ನಿರಂತರ ದಾಳಿ ನಡೆಸುತ್ತಿದ್ದು ಆದರೆ ಘಟನೆಯ ಹೊಣೆಯನ್ನು ಹೊತ್ತುಕೊಳ್ಳಲು ಮಾತ್ರ ಹಿಂದೇಟು ಹಾಕುತ್ತಿದೆ ಎಂದು ಹರಿಹಾಯ್ದಿದೆ.

Also Read  ಪ್ರಕ್ಷುಬ್ಧ ಸಿರಿಯಾದಿಂದ 75 ಮಂದಿ ಭಾರತೀಯರ ರಕ್ಷಣೆ

error: Content is protected !!
Scroll to Top