ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ನಲ್ಲಿ ಮಿಂಚಿದ ಕಡಬದ ಮೋಹನ್ ಕೆರೆಕೋಡಿ ➤ 800 ಮೀಟರ್ ಓಟದಲ್ಲಿ ಕಂಚು

(ನ್ಯೂಸ್ ಕಡಬ) newskadaba.com ಕಡಬ, ಜ.11. ಕೇರಳದ ಕ್ಯಾಲಿಕಟ್ ನ ಒಲಿಂಪಿಯನ್ ರೆಹಮಾನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾವನ್ನು ಒಳಗೊಂಡ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ನಲ್ಲಿ ಕಡಬದ ಮೋಹನ್ ಕೆರೆಕೋಡಿ 800ಮೀಟರ್ ಓಟದಲ್ಲಿ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ.

ಕಡಬದ ಗ್ರಾಮೀಣ ಕ್ರೀಡಾ ಸಾಧಕನಾಗಿರುವ ಮೋಹನ್ ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದು, ಜನವರಿ 11 ಮತ್ತು 12 ರಂದು 1500 ಮೀಟರ್ ಓಟ ಹಾಗೂ 100 ಮೀಟರ್ ಓಟದಲ್ಲಿ ಭಾಗವಹಿಸಲಿದ್ದಾರೆ.

Also Read  ಒಂದೂವರೆ ತಿಂಗಳ ಹಿಂದೆ ಕಬಕದಿಂದ ನಾಪತ್ತೆಯಾಗಿದ್ದ ವ್ಯಕ್ತಿ ಪತ್ತೆ

error: Content is protected !!
Scroll to Top