ಒಮನ್ ಸುಲ್ತಾನ ಖಬೂಸ್ ಬಿನ್ ಸೈಯದ್ ನಿಧನ

ಮಸ್ಕತ್, ಜ.11: ಅರಬ್ ದೇಶದ ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಒಮನ್‌ನ ಸುಲ್ತಾನ್, ಖಬೂಸ್ ಬಿನ್ ಸೈಯದ್(79) ನಿಧನರಾಗಿದ್ದಾರೆ.

ಅರಬ್‌ ಜಗತ್ತಿನ ಸುದೀರ್ಘ ಅವಧಿ ಆಡಳಿತ ನಡೆಸಿದ ರಾಜ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅವರ ನಿಧನಕ್ಕೆ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಿಗೆ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಲಾಗಿದೆ  ಎಂದು ಪ್ರಕಟನೆ ತಿಳಿಸಿದೆ.

ಬ್ರಿಟೀಷರ ನೆರವಿನೊಂದಿಗೆ 1970 ರಲ್ಲಿ ರಕ್ತರಹಿತ ಕ್ರಾಂತಿಯಲ್ಲಿ ತನ್ನ ತಂದೆಯನ್ನು ಪದಚ್ಯುತಗೊಳಿಸಿ ಅವರು ಅಧಿಕಾರಕ್ಕೆ ಏರಿದರು. ತೈಲ ಸಂಪತ್ತನ್ನು ಬಳಸಿಕೊಂಡು ಒಮನ್‌ ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ಕೊಂಡ್ಯೊಯ್ದಿದ್ದಾರೆ. ಅವರು ಬೆಲ್ಜಿಯಂನಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದು ಕಳೆದ ತಿಂಗಳು ವಾಪಸ್ಸಾಗಿದ್ದರು. ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಸುಲ್ತಾನ್ ಅವಿವಾಹಿತರಾಗಿದ್ದು ಉತ್ತರಾಧಿಕಾರಿಯನ್ನು ಹೊಂದಿಲ್ಲ ಅಥವಾ ಯಾರನ್ನೂ ಆ ಹುದ್ದೆಗೆ ನೇಮಿಸಿರಲಿಲ್ಲ. ಸುಮಾರು 50 ಪುರುಷ ಸದಸ್ಯರನ್ನು ಹೊಂದಿರುವ ಸುಲ್ತಾನರ ಮೂಲ ಶಾಸನದ ಪ್ರಕಾರ ಸಿಂಹಾಸನವು ತೆರವಾದ ಮೂರು ದಿನಗಳಲ್ಲಿ ಹೊಸ ಸುಲ್ತಾನನನ್ನು ಆಯ್ಕೆ ಮಾಡಬೇಕು.

ಕುಟುಂಬವು ಹೊಸ ಸುಲ್ತಾನನನ್ನು ಆಯ್ಕೆ ಮಾಡಲು ಸಾಧ್ಯವಾಗದಿದ್ದರೆ, ರಕ್ಷಣಾ ಮಂಡಳಿಯ ಸದಸ್ಯರು, ಸುಪ್ರೀಂ ಕೋರ್ಟ್ ಮುಖ್ಯಸ್ಥರು, ರಾಜತಾಂತ್ರಿಕ ಮಂಡಳೀ ಹಾಗೂ ರಕ್ಷಣಾ ಮಂಡಳಿಯ ಸದಸ್ಯರು ಸುಲ್ತಾನ್‌ ಅವರು ತಮ್ಮ ಆಯ್ಕೆಯನ್ನು ದಾಖಲು ಮಾಡಿರುವ ರಹಸ್ಯ ಪತ್ರದಲ್ಲಿ ನಮೂದಿಸಿರುವವರನ್ನು ಪಟ್ಟಕ್ಕೆ ತರಳಿದ್ದಾರೆ.

 

error: Content is protected !!

Join the Group

Join WhatsApp Group