ಬಾಗ್ದಾದ್‌: ಅಮೇರಿಕಾದಿಂದ ಮತ್ತೆ ವಾಯು ದಾಳಿ; ಆರು ಸಾವು

ಬಾಗ್ದಾದ್, ಜ.4: ಬಾಗ್ದಾದ್ ವಿಮಾನ ನಿಲ್ದಾಣಕ್ಕೆ ರಾಕೆಟ್ ದಾಳಿ ನಡೆಸಿದ ಅಮೇರಿಕಾ ಇರಾನ್ ನ ಸೇನಾಧಿಕಾರಿಯನ್ನು ಹತ್ಯೆ ಮಾಡಲಾದ ಕೆಲವೇ ಗಂಟೆಗಳಲ್ಲಿ ಅಮೇರಿಕಾ ಮತ್ತೆ ವಾಯುದಾಳಿ ನಡೆಸಿದೆ. ಶನಿವಾರ ಮುಂಜಾನೆ ಇರಾಕ್ ನ ಹಶೆಬ್ ಅಲ್ ಶಾಬಿ ಅರೆಸೇನಾ ಪಡೆಯ ವಾಹನಗಳ ಅಮೇರಿಕಾ ದಾಳಿ ನಡೆಸಿದೆ ಎಂದು ವರದಿಯಾಗಿದೆ.

ಶನಿವಾರ ಮುಂಜಾನೆ ನಡೆದ ದಾಳಿಯಿಂದ ಸುಮಾರು ಆರು ಜನರು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ವಾಹನಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ. ನಿಖರವಾಗಿ ಯಾರನ್ನು ಕೊಲ್ಲುವ ಉದ್ದೇಶದಿಂದ ಈ ದಾಳಿ ಮಾಡಲಾಗಿದೆ ಎಂದು ಖಚಿತವಾಗಿಲ್ಲ. ಶುಕ್ರವಾರ ಅಮೇರಿಕಾ ನಡೆಸಿದ ವಾಯುದಾಳಿಯಲ್ಲಿ ಸೇನಾಧಿಕಾರಿ ಖಾಸಿಂ ಸೊಲೇಮನಿ ಮತ್ತು ಅಬು ಮೆಹದಿ ಅಲ್ ಮುಹಂದಿಸ್ ಸೇರಿದಂತೆ ಹಲವರು ಸಾವನ್ನಪ್ಪಿದರು. ಅವರ ಪಾರ್ಥೀವ ಶರೀರದ ಅಂತಿಮ ಯಾತ್ರೆಗೆ ಸಿದ್ದತೆ ನಡೆದ ಬೆನ್ನಲ್ಲೆ ಅಮೇರಿಕಾದಿಂದ ಮತ್ತೊಂದು ದಾಳಿ ನಡೆದಿದೆ. ಬಾಗ್ದಾದ್ ನಲ್ಲಿರುವ ಅಮೇರಿಕಾ ರಾಯಭಾರ ಕಚೇರಿಯ ಮೇಲೆ ಇತ್ತೀಚಿಗೆ ನಡೆದ ದಾಳಿಗೆ ಪ್ರತೀಕಾರವಾಗಿ ಅಮೇರಿಕಾ ಶುಕ್ರವಾರ ದಾಳಿ ನಡೆಸಿತ್ತು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದ ಮೇರೆಗೆ ಈ ದಾಳಿ ನಡೆಸಿದೆ ಎಂದು ಅಮೇರಿಕಾ ರಕ್ಷಣಾ ಕಾರ್ಯಾಲಯ ಸ್ಪಷ್ಟಪಡಿಸಿದೆ.

Also Read  ಪುರುಷರಲ್ಲಿ ಪರಸ್ತ್ರೀಯರ ಕಂಟಕ ಹೇಗೆ ಬರುತ್ತದೆ ನಿಮ್ಮ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ

Nk Kukke

error: Content is protected !!
Scroll to Top