ಬಾಗ್ದಾದ್ ವಿಮಾನ ನಿಲ್ದಾಣದ ಮೇಲೆ ರಾಕೆಟ್ ದಾಳಿ: ಇರಾನ್ ಕಮಾಂಡರ್ ಮೇಜರ್ ಜನರಲ್ ಸಹಿತ ಎಂಟು ಮಂದಿ ಹತ್ಯೆ

ಬಾಗ್ದಾದ್, ಜ.3: ಬಾಗ್ದಾದ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ನಡೆದ ವೈಮಾನಿಕ ರಾಕೆಟ್ ದಾಳಿಯಲ್ಲಿ ಇರಾನ್ ನ ಕಮಾಂಡರ್ ಮೇಜರ್ ಜನರಲ್ ಖಾಸಿಂ ಸೊಲೆಮನಿ ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಇರಾಕ್ ಅಧಿಕಾರಿಗಳು ತಿಳಿಸಿದ್ದಾರೆ.

ಇರಾಕ್ ರಾಜಧಾನಿ ಬಾಗ್ದಾದ್ ನಲ್ಲಿ ನಡೆದ ಈ ಏರ್ ಸ್ಟ್ರೈಕ್ ನಲ್ಲಿ ಸೊಲೆಮನಿ ಅಲ್ಲದೇ ಪಾಪ್ಯುಲರ್ ಮೊಬಿಲೈಸೇಶನ್ ಫೋರ್ಸಸ್ (ಪಿಎಂಎಫ್) ಎಂದು ಕರೆಯಲ್ಪಡುವ ಇರಾನ್ ಬೆಂಬಲಿತ ಸೇನಾಪಡೆಗಳ ಡೆಪ್ಯುಟಿ ಕಮಾಂಡರ್ ಅಬು ಮೆಹದಿ ಅಲ್-ಮುಹಂದಿಸ್ ಅವರನ್ನು ಹತ್ಯೆ ನಡೆಸಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

Nk Kukke

ಇರಾನ್ ಬೆಂಬಲಿತ ಪಾಪ್ಯುಲರ್ ಮೊಬಿಲೈಸೇಶನ್ ಪೋರ್ಸಸ್ ಈ ದಾಳಿಗೆ ಅಮೇರಿಕವನ್ನು ಹೊಣೆ ಮಾಡಿದೆ. ಆದರೆ ಈ ಬಗ್ಗೆ ಅಮೆರಿಕಾ ಅಥವಾ ಇರಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಳೆದ ವಾರವಷ್ಟೇ ಇರಾಕ್ ನ ಅಮೇರಿಕ ರಾಯಭಾರ ಕಚೇರಿಗೆ ನುಗ್ಗಿ ಇರಾನ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಈ ಘಟನೆಯ ಬೆನ್ನಲ್ಲೇ ಈ ದಾಳಿ ನಡೆದಿದೆ. ಕ್ಷಿಪಣಿ ಅಥವಾ ರಾಕೆಟ್‌ ದಾಳಿ ಯಾರನ್ನು ಗುರಿಯಾಗಿಸಿಕೊಂಡು ಯಾರು ನಡೇಸಿದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಇರಾನ್ ನ ಕಮಾಂಡರ್ ಮೇಜರಲ್ ಜನರಲ್ ಖಾಸಿಂ ಸೊಲೆಮನಿ ಧರಿಸಿದ್ದ ಉಂಗುರದಿಂದ ಅವರ ಮೃತದೇಹವನ್ನು ಗುರುತಿಸಲಾಗಿದೆ ಎಂದು ತಿಳಿದುಬಂದಿದೆ.

Also Read  ಅಮೇರಿಕ ನ್ಯಾಯಾಲಯದ ನ್ಯಾಯಾಧೀಶೆಯಾಗಿ ಭಾರತೀಯ ಮೂಲದ ಮಹಿಳೆ ನೇಮಕ

ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂರು ರಾಕೆಟ್ ಬಾಂಬ್ ಗಳು ಮತ್ತು ಎರಡು ಕಾರುಗಳು ಸ್ಪೋಟಗೊಂಡಿದ್ದು ದಾಳಿಯಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಇರಾಕ್ ರಕ್ಷಣಾ ಇಲಾಖೆ ಹೇಳಿದೆ.

 

error: Content is protected !!
Scroll to Top