ನೇತ್ರ ಪರೀಕ್ಷಾ ಶಿಬಿರ



(ನ್ಯೂಸ್ ಕಡಬ) newskadaba.com, ಮಂಗಳೂರು, ಜ.2   ಜಿಲ್ಲಾ ಸಂಚಾರಿ ನೇತ್ರ ಘಟಕ, ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು ಇಲ್ಲಿನ 2020ನೇ ಜನವರಿ ಮಾಹೆಯಲ್ಲಿ  ಸಂಚಾರಿ ನೇತ್ರ ಘಟಕದಡಿಯಲ್ಲಿ ನಡೆಸಲ್ಪಡುವ  ನೇತ್ರ ಪರೀಕ್ಷಾ ಶಿಬಿರದ ವಿವರ. ಜನವರಿ  3 ರಂದು  ಬೆಳಿಗ್ಗೆ 8.30 ಗಂಟೆಗೆ ಮಂಗಳೂರು ತಾಲೂಕು ಮುಲ್ಕಿ ಕೆರೆಕಾಡು ಭಜನಾ ಮಂದಿರ, ಜನವರಿ 7 ರಂದು ಬೆಳಿಗ್ಗೆ 8.30ಕ್ಕೆ ಬೀಚ್ ರೋಡ್ ಅಲ್ಟ್ರಾಟೆಕ್ ಸಿಮೆಂಟ್, ಪಣಂಬೂರು,  ಜನವರಿ 21  ರಂದು ಬೆಳಿಗ್ಗೆ 7.30 ಗಂಟೆಗೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ,  ಜನವರಿ 24 ರಂದು ಬೆಳಿಗ್ಗೆ 7.30 ಗಂಟೆಗೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು, ಜನವರಿ 28 ರಂದು ಬೆಳಿಗ್ಗೆ 8 ಗಂಟೆಗೆ ಬೆಳ್ತಂಗಡಿ ತಾಲೂಕಿನ  ಕರಾಯ,  ಜನವರಿ 31 ರಂದು  ಬೆಳಿಗ್ಗೆ 7.30 ಗಂಟೆಗೆ ಪುತ್ತೂರು ತಾಲೂಕಿನ ನೆಲ್ಯಾಡಿಯಲ್ಲಿ ಶಿಬಿರ ನಡೆಯಲಿದೆ.







ಸಾರ್ವಜನಿಕರು ಶಿಬಿರದ ಸದುಪಯೋಗವನ್ನು ಪಡೆಯುವಂತೆ ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧೀಕ್ಷಕರು, ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.






error: Content is protected !!
Scroll to Top