ಕುಂದಾಪುರ: ನೀರು ಸೇದಲು ಹೋದ ವಿದ್ಯಾರ್ಥಿನಿ ಬಾವಿಗೆ ಬಿದ್ದು  ಮೃತ್ಯು

ಕುಂದಾಪುರ, ಡಿ.31: ಬಾವಿಯಿಂದ ನೀರು ಸೇದುವ ವೇಳೆ ಹಗ್ಗ ತುಂಡಾದ ಪರಿಣಾಮ ವಿದ್ಯಾರ್ಥಿನಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಾವುಂದ ಗ್ರಾಮದ ಕುದ್ರುಕೋಡು ಬಾಗಳಾಡಿಯಲ್ಲಿ ನಡೆದಿದೆ.

ಮೃತರನ್ನು  ಕುದ್ರುಕೋಡಿನ ಬಾಬು ಮೊಗವೀರ ಎಂಬವರ ಪುತ್ರಿ ಪ್ರೀತಿ (19) ಎಂದು ಗುರುತಿಸಲಾಗಿದೆ. ಬಾರ್ಕೂರಿನಲ್ಲಿ ಪದವಿ ವಿದ್ಯಾರ್ಥಿನಿಯಾಗಿರುವ ಪ್ರೀತಿ ಕ್ರಿಸ್‌ಮಸ್‌ ರಜೆಯ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದರು. ಮನೆಯ ಹತ್ತಿರವಿರುವ ಬಾವಿಯಿಂದ ನೀರು ತರಲೆಂದು ಹೋಗಿದ್ದು, ಈ ಸಂದರ್ಭ ಹಗ್ಗ ತುಂಡಾಗಿ ಪ್ರೀತಿ ಬಾವಿಗೆ ಬಿದ್ದಿದ್ದಾರೆನ್ನಲಾಗಿದೆ. ತುಂಬಾ ಹೊತ್ತು ಕಳೆದರೂ ಮನೆಗೆ ಬಾರದ ಪ್ರೀತಿಯನ್ನು ಬಾವಿಯ ಸಮೀಪ ಹುಡುಕಾಡಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ಬಳಿಕ ಬಾವಿಗಿಳಿದು ಪರಿಶೀಲಿಸಿದಾಗ ಪ್ರೀತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಕುರಿತು ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಉಪ್ಪಿನಂಗಡಿ: ಗದ್ದೆಗೆ ಉರುಳಿದ ಆಟೋ ರಿಕ್ಷಾ ➤ ಮೂವರು ಗಂಭೀರ

Nk Kukke

 

error: Content is protected !!
Scroll to Top