ಮಸೀದಿಗಳಲ್ಲಿ ಡಿ ಪಿ ಟಿ ಮತ್ತು ಟಿ ಡಿ ಲಸಿಕಾ ಮಾಹಿತಿ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.28  ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಸೂಚನೆಯಂತೆ ರಾಜ್ಯದ ಆರೋಗ್ಯ ಇಲಾಖೆಯ ಪ್ರಕಾರ ಗಂಟಲು ಮಾರಿ ಕಾಯಿಲೆ ಹೆಚ್ಚಾಗಿ ಕಂಡು ಬರುತ್ತಿದ್ದು ಈಗಾಗಲೇ 500 ಕ್ಕೂ ಹೆಚ್ಚು ಸಂಕಿತ ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳಲ್ಲಿ ಶೇಕಡಾ 70 ರಷ್ಟು 5 ರಿಂದ 16 ವರ್ಷ ವಯಸ್ಸಿನಲ್ಲಿ ಕಂಡು ಬಂದಿದೆ. ಇದಲ್ಲದೆ ರಾಜ್ಯದ 9 ಜಿಲ್ಲೆಗಳಲ್ಲಿ 370 ಪ್ರಕರಣಗಳು ವರದಿಯಾಗಿರುತ್ತದೆ. ಆದುದರಿಂದ ಈ ರೋಗ ಬರದಂತೆ /ಹೆಚ್ಚಾಗದಂತೆ ರಾಜ್ಯದಲ್ಲಿ ಗಂಟಲು ಮಾರಿ ಕಾಯಿಲೆಗೆ ಡಿ ಪಿ ಟಿ ಮತ್ತು ಟಿ ಡಿ ಲಸಿಕೆ ಹಾಕುವ ಬಗ್ಗೆ ಅಭಿಯಾನದ ಅರಿವು ಮೂಡಿಸುವ ಸಲುವಾಗಿ ಆರೋಗ್ಯ ಇಲಾಖೆಯು ಡಿಸೆಂಬರ್ 11 ರಿಂದ 31 ರವರೆಗೆ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿರುವ ಎಲ್ಲಾ ಮಸೀದಿಗಳಲ್ಲಿ ಶುಕ್ರವಾರ ಜುಮ್ಮಾ  ನಮಾಝಿನ ನಂತರ ಮಸೀದಿಯಲ್ಲಿ ಇಮಾಮರು ಈ ಬಗ್ಗೆ ಜಮಾಅತ್ ಸದಸ್ಯರಿಗೆ ಮಾಹಿತಿಯನ್ನು ನೀಡಬೇಕು  ಎಂದು ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟಣೆ ತಿಳಿಸಿದೆ.

Scroll to Top