ಉಪ್ಪಿನಂಗಡಿ: ವಿವಾಹಿತ ಮಹಿಳೆಯ ಬರ್ಬರ ಕೊಲೆ ➤ ಪತಿಯಿಂದಲೇ ಕೊಲೆ ಶಂಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ.17. ಬೆಳ್ತಂಗಡಿ ತಾಲೂಕಿನ ಕರಾಯ ಸಮೀಪದ ಗೇರುಕಟ್ಟೆ ಎಂಬಲ್ಲಿ ಗೃಹಿಣಿಯೋರ್ವರನ್ನು ಕೊಲೆ ಮಾಡಿದ ಘಟನೆ ಮಂಗಳವಾರದಂದು ಬೆಳಕಿಗೆ ಬಂದಿದೆ.

ಮೃತ ಮಹಿಳೆಯನ್ನು ಬೆಳ್ತಂಗಡಿ ತಾಲೂಕು ಗೇರುಕಟ್ಟೆ ನಿವಾಸಿ ಉಮರ್ ಫಾರೂಕ್ ಎಂಬವರ ಪತ್ನಿ ತಸ್ಲೀಮಾ ಎಂದು ಗುರುತಿಸಲಾಗಿದೆ. ಮೂಲತಃ ಪುತ್ತೂರಿನವರಾಗಿದ್ದ ತಸ್ಲೀಮಾರನ್ನು ಬೆಳ್ತಂಗಡಿಯ ಫಾರೂಕ್ ರವರಿಗೆ ವಿವಾಹ ಮಾಡಿಕೊಡಲಾಗಿತ್ತು. ಮನೆಯ ಶೌಚಾಲಯದಲ್ಲಿ ತಸ್ಲೀಮರವರ ಮೃತದೇಹ ಕಂಡು ಬಂದಿದ್ದು, ಪತಿ ಫಾರೂಕ್ ರವರೇ ಪತ್ನಿಯನ್ನು ಕೊಲೆಗೈದಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ. ಹಾಗೂ ಎಸ್.ಐ. ನಂದಕುಮಾರ್ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಕೊಲೆಗೆ ಸ್ಪಷ್ಟ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

Also Read  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ►ಗ್ರಾಮಾಭಿವೃದ್ಧಿ ಯೋಜನೆ ಸ್ವಾವಲಂಬಿ ಬದುಕಿಗೆ ಪ್ರೇರಣೆ - ಬಾಲಕೃಷ್ಣ ಬಳ್ಳೇರಿ

Nk Kukke

error: Content is protected !!
Scroll to Top