ಇಸ್ಲಮಾಬಾದ್, ಡಿ.17: ದೇಶ ದ್ರೋಹದ ಆರೋಪದಲ್ಲಿ ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಶ್ರಫ್ ಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಪಾಕಿಸ್ಥಾನದ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ನಾಲ್ಕು ವರ್ಷದ ಹಿಂದೆ ಲಂಡನ್ ಗೆ ಪರಾರಿಯಾಗಿದ್ದ ಮುಶ್ರಫ್ ನಂತರ ಕಳೆದ ಪಾಕಿಸ್ಥಾನ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಮತ್ತೆ ಪಾಕಿಸ್ಥಾನಕ್ಕೆ ಆಗಮಿಸಿದ್ದರು. ಸದ್ಯ ದುಬೈನಲ್ಲಿ ನೆಲೆಸಿರುವ ಪರ್ವೇಜ್ ಮುಶ್ರಫ್ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪಾಕಿಸ್ಥಾನದ ಸೇನಾಧಿಕಾರಿಯಾಗಿದ್ದ ಪರ್ವೇಜ್ ನಂತರ ದಂಗೆ ನಡೆಸಿ ದೇಶದ ಚುಕ್ಕಾಣಿ ಹಿಡಿದಿದ್ದರು. 1999ರಿಂದ 2008ರವರೆಗೆ ಪಾಕಿಸ್ಥಾನದಲ್ಲಿ ಅಧಿಕಾರ ಅನುಭವಿಸಿದ್ದ ಮುಶ್ರಫ್ ಸಮಯದಲ್ಲೇ ಭಾರತ- ಪಾಕ್ ನಡುವಿನ ಕಾರ್ಗಿಲ್ ಯುದ್ದವೂ ನಡೆದಿತ್ತು.