ಊಟ ಮಾಡದ್ದಕ್ಕೆ ಅಜ್ಜಿ ವಿಚಾರಿಸಿದರೆಂಬ ಕಾರಣ ➤ 10 ವರ್ಷದ ಬಾಲಕಿ ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.28. ಅಜ್ಜಿ ಊಟ ಮಾಡಲು ಹೇಳಿ ಬೈದರು ಎಂಬ ಕಾರಣಕ್ಕೆ 10 ವರ್ಷ ಪ್ರಾಯದ ಬಾಲಕಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಲ್ಕಿ ನಡೆದಿದೆ.


ಆತ್ಮಹತ್ಯೆ ಮಾಡಿಕೊಂಡ ಬಾಲಕಿಯನ್ನು ಮುಲ್ಕಿಯ ಐಕಳ ಸಮೀಪದ ಕಮ್ಮಜೆ ನಿವಾಸಿ, ಕಿನ್ನಿಗೋಳಿಯ ಖಾಸಗಿ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ಧ್ರುವಿ(10) ಎಂದು ಗುರುತಿಸಲಾಗಿದೆ. ಬಾಲಕಿಯ ಅಜ್ಜಿ ಊಟ ಮಾಡದೆ ಇದ್ದ ಧ್ರುವಿಯನ್ನು ವಿಚಾರಿಸಿದ್ದಕ್ಕಾಗಿ ಕೋಪಗೊಂಡ ಬಾಲಕಿ ಕೊರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಮುಲ್ಕಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Scroll to Top