➤➤ ಕವನ ➤ ಉಳಿಸು ಕನ್ನಡವ ✍ ಸಮ್ಯಕ್ತ್. ಹೆಚ್. ಜೈನ್

_____________________________

~~ಉಳಿಸು ಕನ್ನಡವ~~

“”””””””””””””””””””””””””

ಕನ್ನಡಾಂಬೆ ಉದರದಲ್ಲಿ
ಹುಟ್ಟಿ ಬೆಳೆದ ಮನುಜರೇ ,
ಪಟ್ಟು ಹಿಡಿದು ಉಳಿಸಿ ಬೆಳೆಸಿ
ನಮ್ಮ ನಾಡ ದೀವಿಗೆ *।*

ಚಿಕ್ಕ ಚೊಕ್ಕ ಭಾಷೆಯನ್ನು
ಉಳಿಸಿ ನೀವು ಹರಸಿರಿ ,
ಮುಂದೆ ಬರುವ ಸಂವತ್ಸರಗಳಿಗೆ
ಕೊಡುಗೆಯನ್ನು ನೀಡಿರಿ *॥*

ನಮ್ಮ ಭಾಷೆ ನಶಿಸುತಿಹುದು
ಅನ್ಯ ಭಾಷಾ ಮೋಹದಿ ,
ಮೋಹಮದವ ತ್ಯಜಿಸಿ ನೀವು
ಮಾತೃ ಭಾಷಾ ಪ್ರೇಮದಿ *।*

ನಾಡ ಒಲವು ಗರಿಕೆ ಗೆಲುವು
ಜಾತಿ -ಬೇಧ ಮರೆಯಿರಿ ,
ಜಾತಿ-ಗೀತಿ ರೀತಿ ಮರೆತು
ಕರುನಾಡ ಬೆಳಗಿರಿ *॥*

ಹೊತ್ತು ತರುವ ವಿಷ ಗಳಿಗೆಯ
ಹಾದಿ ಬೀದಿ ಗುಡಿಸಿರಿ ,
ಗುಡಿ ಗೋಪುರ ಮಠಗಳಲ್ಲಿ
ತಾಯಿಗೊಲವು ತೋರಿರಿ *।*

Also Read  ವಾಹನ ಸಂಚಾರಕ್ಕೆ ಮುಕ್ತವಾದ ಪಡೀಲ್ 2ನೇ ಅಂಡರ್ ಪಾಸ್

ಅನ್ನ ನೀಡಿ ; ನೀರ ನೀಡಿ ;
ಪೊರೆವಳಂಬೆ ಜಗದಂಬೆಯು ,
ಮಾತು ಬರಹ ಓದಿನಲಿ
ಭುವನೇಶ್ವರಿಗೆ ಪೂಜೆಯು

ತಾಯ ಕೂಗ ಕೇಳಿ ಏಳಿ
ವೀರ ಧೀರ ಪುತ್ರರೇ ,
ಕನ್ನಡವ ಉಳಿಸುವವರು
ಇಲ್ಲಿ ನೀವು ಮಾತ್ರವೇ *।*

“””””””””””””””””””””””””””””

✍ಸಮ್ಯಕ್ತ್. ಹೆಚ್. ಜೈನ್
” ಸಮ್ಮೇದ ”

ಹೊಸಂಗಡಿ ಬಸದಿ ಮನೆ
ನೂಜಿಬಾಳ್ತಿಲ ,ಕಡಬ

error: Content is protected !!
Scroll to Top