ಕಡಬ: ಟೈಲರಿಂಗ್ ತರಬೇತಿಗೆ ಬರುತ್ತಿದ್ದ ಅಪ್ರಾಪ್ತೆಯ ಅತ್ಯಾಚಾರ ➤ ಗರ್ಭಿಣಿ ಆಗಿದ್ದರಿಂದ ಪ್ರಕರಣ ಬೆಳಕಿಗೆ



(ನ್ಯೂಸ್ ಕಡಬ) newskadaba.com ಕಡಬ, ನ.26. ಟೈಲರಿಂಗ್ ತರಬೇತಿಗೆಂದು ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದು, ಆರೋಪಿಯ ವಿರುದ್ಧ ಕಡಬ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.







ನೆಲ್ಯಾಡಿ ಸಮೀಪದ ಕೊಕ್ಕಡ ಗ್ರಾಮದ ಮುಳಿಂಗಾರು ನಿವಾಸಿ ಮುತ್ತಪ್ಪ ಗೌಡ ಎಂಬವರ ಪುತ್ರ ಅರುಣ್ (22) ಎಂಬಾತ ಕಡಬಕ್ಕೆ ಟೈಲರಿಂಗ್ ತರಬೇತಿಗೆಂದು ತೆರಳುತ್ತಿದ್ದ ಅಪ್ರಾಪ್ತೆಯನ್ನು ಬಲ್ಯ ಸಮೀಪದ ಕಾಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಇದರಿಂದಾಗಿ ಆಕೆ ಗರ್ಭಿಣಿಯಾಗಿದ್ದು, ಸಂತ್ರಸ್ತೆ ನೀಡಿದ ದೂರಿನಂತೆ ಆರೋಪಿಯ ವಿರುದ್ಧ ಕಡಬ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.






 

error: Content is protected !!
Scroll to Top