(ನ್ಯೂಸ್ ಕಡಬ) newskadaba.com ಪುತ್ತೂರು, ನ.26. ಇಲ್ಲಿನ ಉದ್ಯಮಿಯೋರ್ವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಘಟನೆ ಮಂಗಳವಾರ ಸಾಯಂಕಾಲ ಪುತ್ತೂರಿನ ಕಬಕದಲ್ಲಿ ನಡೆದಿದೆ.
ಕಬಕ ಕಲ್ಲಂದಡ್ಕ ನಿವಾಸಿ ಕಲ್ಲಿನ ಕೋರೆ ಮಾಲೀಕ ಖಾದರ್ ಎಂಬವರನ್ನು ಮಾತನಾಡಲಿಕ್ಕಿದೆ ಎಂದು ಹೊರ ಕರೆದ ವಿಟ್ಲದ ಸಾದಿಕ್ ಹಾಗೂ ತಂಡದವರು ಖಾದರ್ ರವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಗಾಯಾಳು ಖಾದರ್ ರವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವರ್ಷದ ಹಿಂದೆ ಇವರ ನಡುವೆ ಘರ್ಷಣೆ ಉಂಟಾಗಿತ್ತು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.