ಕಡಬ: ಮೂರು ವಾಹನಗಳ ನಡುವೆ ಸರಣಿ ಅಪಘಾತ ➤ ಮಹಿಳೆಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ನ.24. ಮಾರುತಿ 800 ಹಾಗೂ ಟೆಂಪೋ ಟ್ರಾವೆಲರ್ ನಡುವೆ ಸರಣಿ ಅಪಘಾತವಾದ ಘಟನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೆಟ್ಟಣ ಎಂಬಲ್ಲಿ ಸೋಮವಾರದಂದು ನಡೆದಿದೆ.

ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಮಾರುತಿ 800 ಕಾರಿನ ಚಾಲಕ ನೆಟ್ಟಣ ಚರ್ಚ್ ಬಳಿ ಹಠಾತ್ತನೆ ಬ್ರೇಕ್ ಹೊಡೆದುದರ ಪರಿಣಾಮ ಹಿಂದಿನಿಂದ ತೆರಳುತ್ತಿದ್ದ ಟೊಯೋಟಾ ಇಟಿಯೋಸ್ ಕಾರು ಮಾರುತಿ-800 ಗೆ ಢಿಕ್ಕಿ ಹೊಡೆದಿದೆ. ಅದರ ಹಿಂದಿನಿಂದ ಬರುತ್ತಿದ್ದ ಟೆಂಪೋ ಟ್ರಾವೆಲ್ಲರ್ ಇಟಿಯೋಸ್ ಕಾರಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮಹಿಳೆಯೋರ್ವರು ಗಂಭೀರ ಗಾಯಗೊಂಡಿದ್ದು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

Also Read  ಉಪ್ಪಿನಂಗಡಿ: ಅಪರಿಚಿತ ವ್ಯಕ್ತಿಯಿಂದ ಹಣ ವಂಚನೆ..! - ದೂರು ದಾಖಲು

error: Content is protected !!
Scroll to Top