ಕಾರುಗಳ ನಡುವೆ ಡಿಕ್ಕಿ



 (ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, .25  ಧರ್ಮಸ್ಥಳ ಲಕ್ಷ ದೀಪೋತ್ಸವ ಕ್ಕೆ ಹೋಗಿ ವಾಪಾಸು ಬರುವಾಗ ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಸೌತಡ್ಕ ಮಹಾಗಣಪತಿ ದ್ವಾರದ ಬಳಿ ಶನಿವಾರದಂದು ನಡೆದಿದೆ.








ಇ ಪಿ ಚಾಕೋ ತನ್ನ ಕುಟುಂಬದೊಂದಿಗೆ ಧರ್ಮಸ್ಥಳ ಲಕ್ಷ ದೀಪೋತ್ಸವಕ್ಕೆ ಹೋಗಿ ವಾಪಾಸು ಕಾರಿನಲ್ಲಿ ಹಿಂತಿರುಗುತ್ತಿದ್ದ ವೇಳೆ ಎದುರುಗಡೆಯಿಂದ ಬಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಕಾರು ಜಖಂ ಗೊಂಡು ಚಾಕೋರವರ ತಲೆಗೆ ತರಚಿದ ಗಾಯ ಹಾಗೂ ಮೈ ಕೈ ಗೆ ಗುದ್ದಿದ ನೋವುಂಟಾಗಿದ್ದು, ಪತ್ನಿ ನಿಮ್ಮಿ ಚಾಕೋ ಎಂಬವರಿಗೆ ಎಡ ಭುಜಕ್ಕೆ ಗುದ್ದಿದ ನೋವಾಗಿದ್ದು , ಮಕ್ಕಳಿಗೆ ಸಣ್ಣ ಪುಟ್ಟ ಗುದ್ದಿದ ನೋವಾಗಿರುತ್ತದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.






error: Content is protected !!
Scroll to Top