ಲೈಸೆನ್ಸ್ ಇಲ್ಲದ ಯುವಕನ ಬೈಕ್ ಅಪಘಾತ ➤ ಯುವಕನ ತಾಯಿಯ ಮೇಲೆ ಕೇಸ್

(ನ್ಯೂಸ್ ಕಡಬ) newskadaba.com ಸುಳ್ಯ, ನ.17. ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಮಗ ಬೈಕ್ ಓಡಿಸಿದ ವೇಳೆ ಅಪಘಾತವಾಗಿ ಪಾದಚಾರಿಯೋರ್ವರು ಮೃತಪಟ್ಟಿದ್ದು, ಪ್ರಕರಣದಲ್ಲಿ ಯುವಕನ ತಾಯಿಯನ್ನೂ ಆರೋಪಿಯನ್ನಾಗಿಸಿದ ಘಟನೆ ಸುಳ್ಯದಿಂದ ವರದಿಯಾಗಿದೆ.

ಸುಳ್ಯ ನಿವಾಸಿ ದೀಕ್ಷಿತ್ ಎಂಬಾತ ಚಲಾಯಿಸುತ್ತಿದ್ದ ಬೈಕ್, ಜಾಲ್ಸೂರು ಗ್ರಾಮದ ಅಡ್ಕಾರು ಭಜನಾ ಮಂದಿರದ ಬಳಿ ಪಾದಚಾರಿಯೋರ್ವರಿಗೆ ಢಿಕ್ಕಿಯಾಗಿದ್ದು, ಆರೋಪಿ ಸವಾರನ ಬಳಿ ಲೈಸೆನ್ಸ್ ಇಲ್ಲದಿದ್ದುದರಿಂದ ಹೊಸ ಮೋಟಾರು ಕಾಯಿದೆಯಂತೆ ಆತನ ತಾಯಿ ಸುನೀತಾ ಅವರನ್ನು ಆರೋಪಿಯನ್ನಾಗಿಸಿ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ರಾಷ್ಟ್ರಧ್ವಜ ಕಂಬಕ್ಕೆ ವಿದ್ಯುತ್ ಸ್ಪರ್ಶ..!           ಚರ್ಚ್ ನ ಪಾದ್ರಿ ಮೃತ್ಯು..!                

error: Content is protected !!
Scroll to Top