ಖ್ಯಾತ ಯುವ ವಾಗ್ಮಿ ಇಕ್ಬಾಲ್ ಬಾಳಿಲ ಇಂದು (ನ.10) ಅಜ್ಜಾವರಕ್ಕೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ನ.10. ಅಲ್ ಅಮೀನ್ ಯಂಗ್ ಮೆನ್ಸ್ಎ ಸೋಸಿಯೇಶನ್ (ರಿ) ಅಡ್ಕ ಇದರ ಆಶ್ರಯದಲ್ಲಿ ಈದ್ ಮಿಲಾದ್ ಪ್ರಯುಕ್ತ ಅಡ್ಕದಲ್ಲಿ ನವೆಂಬರ್ 10ರಂದು ಆದಿತ್ಯವಾರ ನಡೆಯಲಿರುವ ಬೃಹತ್ ಮೀಲಾದ್ ಸ್ನೇಹ ಸಂಗಮದಲ್ಲಿ ಖ್ಯಾತ ಯುವ ವಾಗ್ಮಿ, ಚಿಂತಕ, ಟ್ರೆಂಡ್ ರಾಜ್ಯ ತರಬೇತುದಾರ ಕೆ.ಎಂ. ಇಕ್ಬಾಲ್ ಬಾಳಿಲ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.

ಮಿಲಾದ್ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಗೇರುಮುಟ್ಟೆ ಸಭಾದ್ಯಕ್ಷತೆ ವಹಿಸಲಿದ್ದು, ಸಿದ್ದೀಖ್ ಅಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಝೈನಿಯಾ ಕಾಲೇಜು ಪ್ರಾಂಶುಪಾಲ ಅಬ್ದುಲ್ಲ ನಿಝಾಮಿ ದುಆಕ್ಕೆ ನೇತೃತ್ವ ವಹಿಸಲಿದ್ದು, ಸಾಮಾಜಿಕ ಮುಖಂಡರಾದ ಕರುಣಾಕರ ಅಡ್ಪಂಗಾಯ, ಹಸೈನಾರ್ ಹಾಜಿ ಗೋರಡ್ಕ, ಶಿವಪ್ರಸಾದ್ ಅಡ್ಪಂಗಾಯ, ಯತಿರಾಜ್ ಅಡ್ಪಂಗಾಯ, ಅಬ್ದುಲ್ ಖಾದರ್ ಕೆ.ಎಂ, ಮುಹಮ್ಮದ್ ಕುಂಞ ತುಪ್ಪಕ್ಕಲ್ಲು, ಮುಹಮ್ಮದ್ ಎಂ.ಎ., ಇರುವಂಬಳ್ಳ ಹಸೈನಾರ್ ಹಾಜಿ, ಸಿದ್ದೀಖ್ ಬೋವಿಕಾನ, ಫಾರೂಖ್ ಎಂ.ಎ., ಹಸೈನಾರ್ ಹಾಜಿ ಅಡಲ್ ಮೊದಲಾದವರು
ಭಾಗವಹಿಸಲಿದ್ದಾರೆ. ಬೆಳಿಗ್ಗೆ 6:30ಕ್ಕೆ ದ್ವಜಾರೋಹಣವನ್ನು ಹಾರಿಸ್ ಕಲ್ತಡ್ಕ ನೆರವೇರಿಸಲಿದ್ದು, ಮಧ್ಯಾಹ್ನ 12ಕ್ಕೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮ ನಡೆಯಲಿದೆ.

Also Read  ಬೆಳ್ಳಾರೆ: ಹೋರಿ ತಿವಿದು ವ್ಯಕ್ತಿ ಮೃತ್ಯು..!


ಅಪರಾಹ್ನ 3:30ರಿಂದ ಸನ್ಮಾನ ಹಾಗೂ ಮಿಲಾದ್ ಸ್ನೇಹ ಸಂಗಮ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top