ಕೊಕ್ಕಡ: ಪ್ರವಾಹದ ನೀರಿನ ಸೆಳೆತಕ್ಕೊಳಗಾಗಿ ಯುವಕ ಮೃತ್ಯು



(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ.09. ಕಪಿಲಾ ನದಿಯಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟ ಘಟನೆ ನೆಲ್ಯಾಡಿ ಸಮೀಪದ ಕೊಕ್ಕಡದಲ್ಲಿ ಗುರುವಾರದಂದು ನಡೆದಿದೆ.







ಮೃತ ಯುವಕನನ್ನು ಕೊಕ್ಕಡ ನಿವಾಸಿ ವಿಶ್ವನಾಥ ಎಂಬವರ ಪುತ್ರ ಭವಿತ್(23) ಎಂದು ಗುರುತಿಸಲಾಗಿದೆ. ಕೊಕ್ಕಡ ಸಮೀಪದ ಸುದೆಗಂಡಿ ಎಂಬಲ್ಲಿ ಕಪಿಲಾ ನದಿಯಲ್ಲಿ ಇಳಿದ ಸಂದರ್ಭದಲ್ಲಿ ಪ್ರವಾಹದ ನೀರಿನ ಸೆಳೆತಕ್ಕೊಳಗಾಗಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ನದಿಯಲ್ಲಿ ನೆರೆ ನೀರಿನ ಪ್ರವಾಹ ಅಧಿಕವಾಗಿರುವ ಹಿನ್ನೆಲೆಯಲ್ಲಿ ಯಾರೂ ನೀರಿಗೆ ಇಳಿಯುವ ಸಾಹಸಕ್ಕೆ ಕೈ ಹಾಕಬಾರದೆಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.






error: Content is protected !!
Scroll to Top