ಬೈಕ್ ಗಳೆರಡರ ನಡುವೆ ಡಿಕ್ಕಿ

(ನ್ಯೂಸ್ ಕಡಬ) newskadaba.com ಪುತ್ತೂರು, .28.  ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಬೈಕ್ ಗ ಳೆರಡರ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಪೇರಮುಗೇರು ಗ್ರಾಮದ ದರ್ಬೆ ಎಂಬಲ್ಲಿ ಶನಿವಾರದಂದು ನಡೆದಿದೆ.

ರುಕ್ಮಯ್ಯ ಬಿ ಎಂಬವರು ಮುರ ಕಡೆಯಿಂದ ಪೇರಮುಗೇರು ಕಡೆಗೆ ಬೈಕ್ ನಲ್ಲಿ ಚಲಿಸುತ್ತಿದ್ದಾಗ ಮೋಟಾರು ಸೈಕಲ್ ಸವಾರ ಮಹೇಂದ್ರ ಎಂಬವರು ಎದುರಿನಿಂದ ಬರುತ್ತಿದ್ದು ಎರಡೂ ಬೈಕ್ ಗಳ ನಡುವೆ ಅಪಘಾತ ಸಂಭವಿಸಿದೆ. ಇಬ್ಬರೂ ಗಾಯಗೊಂಡಿದ್ದು ಗಾಯಾಳುಗಳನ್ನು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿರುವುದಾಗಿ ಪ್ರಕರಣ ದಾಖಲಾಗಿದೆ.

Scroll to Top