ರಾಜ್ಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ➤ ಶಕ್ತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಚಾಂಪಿಯನ್

(ನ್ಯೂಸ್ ಕಡಬ) newskadaba.com ಮಂಗಳೂರು ಅ.22, ವಾಮಂಜೂರಿನ ಸಂತ ರೈಮಂಡ್ಸ್ ಶಾಲೆಯಲ್ಲಿ ಜೆಎಸ್‍ಕೆಎ ಕರ್ನಾಟಕ ವತಿಯಿಂದ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಮಂಗಳೂರು ಮುಕ್ತ ಕರಾಟೆ ಚಾಂಪಿಯನ್‍ಶಿಪ್  ನಲ್ಲಿ ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಹಾಗೂ ಶಕ್ತಿ ಪಿ.ಯುಕಾಲೇಜಿನ ಏಳನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿ ಚಾಂಪಿಯನ್ ಪಡೆದು ಹೊರಹೊಮ್ಮಿದ್ದಾರೆ.

 

ಶಕ್ತಿ ಶಾಲೆಯ ವಿದ್ಯಾರ್ಥಿಗಳಾದ ನಾಫಿ ಶೇಖ್ ಕಟ ಮತ್ತು ಕುಮಿಟೆ ಕರಾಟೆಯಲ್ಲಿ ಚಿನ್ನ ಮತ್ತು ಕಂಚು, ಚಿರಂತ್ ಎನ್.ಎಮ್.ಕೆ ಕುಮಿಟೆ ಕರಾಟೆಯಲ್ಲಿ ಬೆಳ್ಳಿ ಮೆಹಫೂಝ್  ರೂಮಿ ಕರಾಟೆಯಲ್ಲಿ ಬೆಳ್ಳಿ, ನೆಹಶಲ್ ಕುಮಿಟೆ ಕರಾಟೆಯಲ್ಲಿ ಕಂಚು, ತಮೀಮ್‍ರೂಮಿ ಮತ್ತು ರಿಜುಲ್ ಕಟದಲ್ಲಿ ಕಂಚು ಪಡೆದಿರುತ್ತಾರೆ ಹಾಗೂ ಶಕ್ತಿ ಪಿ.ಯು ಕಾಲೇಜಿನ ಅಂಜಲಿ ಜೋಗಿ ಕುಮಿಟೆಯಲಿ   ಚಿನ್ನ, ಕಟದಲ್ಲಿ ಕಂಚು ಪಡೆದು ಶಾಲೆಗೆ ಕೀರ್ತಿತಂದಿರುತ್ತಾರೆ. ಇವರನ್ನು ಶಾಲೆಯ ಸಂಸ್ಥಾಪಕರಾದ ಕೆ.ಸಿ ನಾಯಕ್, ಪ್ರಧಾನ ಸಲಹೆಗಾರ  ರಮೇಶ್ ಕೆ. ಶಕ್ತಿ ಶಾಲೆಯ ಪ್ರಾಂಶುಪಾಲೆ ವಿದ್ಯಾಕಾಮತ್ ಜಿ. ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ ಜಿ.ಎಸ್, ಕರಾಟೆ ತರಭೇತುದಾರ ಅರ್ಜುನ್ ಶೆಟ್ಟಿ ಅಭಿನಂದಿಸಿದರು.

Also Read  ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ - ಭಾರತಕ್ಕೆ ಜಯ

error: Content is protected !!
Scroll to Top