ವಿದ್ಯಾಭಾರತಿ ಜಿಲ್ಲಾ ಮಟ್ಟದ ಗುಡ್ಡಗಾಡು ಓಟ ➤ ಬಾಲಕರ ವಿಭಾಗದಲ್ಲಿ ಕಡಬದ ಸರಸ್ವತೀ ವಿದ್ಯಾಲಯ ರಾಷ್ಟ್ರಮಟ್ಟಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಅ.19. ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಗುಡ್ಡಗಾಡು ಓಟದ ಬಾಲಕರ ವಿಭಾಗದಲ್ಲಿ ಸರಸ್ವತೀ ಪದವಿಪೂರ್ವ ವಿದ್ಯಾಲಯದ ತಂಡವು ಗೆಲುವು ಸಾಧಿಸಿ ಬೆಳಗಾವಿಯಲ್ಲಿ ನಡೆದ ವಿದ್ಯಾಭಾರತಿ ಪ್ರಾಂತ ಮತ್ತು ಕ್ಷೇತ್ರಿಯ ಮಟ್ಟದಲ್ಲಿ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ರಾಜಸ್ಥಾನದ ನಾಗೂರಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಈ ತಂಡದ ಗುರು ಪ್ರಸಾದ್, ವಿಜಯ್‍ಕುಮಾರ್, ರಶಿತ್, ಸುಜಿತ್ ಎಂ, ಮನೀಶ್, ತೇಜಪ್ರಕಾಶ್ ದಕ್ಷಿಣ ಮಧ್ಯಕ್ಷೇತ್ರವನ್ನು ಪ್ರತಿನಿಧಿಸಲಿದ್ದಾರೆ. ಈ ತಂಡಕ್ಕೆ ದೈಹಿಕ ಶಿಕ್ಷಕ ಲಕ್ಷ್ಮೀಶ ಗೌಡ ಮಾರ್ಗದರ್ಶನ ನೀಡಿದ್ದಾರೆ.

Scroll to Top