ಅ.22: ಶ್ರೀನಿವಾಸ ವಿಶ್ವವಿದ್ಯಾನಿಲಯದಲ್ಲಿ ಮ್ಯಾಗ್ಮಾ – 2019 ➤ ರಾಷ್ಟ್ರ ಮಟ್ಟದ ಸ್ನಾತಕೋತ್ತರ ಅಂತರ್ ಕಾಲೇಜು ಸ್ಪರ್ಧೋತ್ಸವ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.19 ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಂಕೀರ್ಣದಲ್ಲಿ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗಾಗಿ ಮ್ಯಾಗ್ಮಾ – 2019 ರಾಷ್ಟ್ರೀಯ ಮಟ್ಟದ ಅಂತರ ಕಾಲೇಜು ಸ್ಪರ್ಧೋತ್ಸವವು ದಿನಾಂಕ 22ನೇ ಅಕ್ಟೋಬರ್, 2019 ರಂದು ಜರಗಲಿದೆ.

 

ಈ ಸ್ಪರ್ಧೋತ್ಸವವನ್ನು ಎಂ.ಬಿ.ಎ. ವಿಭಾಗದ ವತಿಯಿಂದ ಆಯೋಜಿಸಲಾಗಿದ್ದು ದೇಶದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಈ ಸ್ಪರ್ಧೋತ್ಸವದಲ್ಲಿ ಭಾಗವಹಿಸಲಿದ್ದಾರೆ. 22.10.2019 ರಂದು ಪೂರ್ವಾಹ್ನ 10.30 ಘಂಟೆಗೆ ಉದ್ಘಾಟನಾ ಕಾರ್ಯಕ್ರಮ ಜರಗಲಿದ್ದು, ಕೋಲ್ಕತಾದ ಕ್ಯಾಟಲಿಸ್ಟ್ ಫೋರ್ಟ್‍ಫೋಲಿಯೊ ಮ್ಯಾನೇಜ್‍ಮೆಂಟ್ ಸರ್ವೀಸ್‍ನ ಮುಖ್ಯಸ್ಥರು ಹಾಗೂ ನ್ಯಾಷನಲ್ ಜಿಯೋಗ್ರಫಿ ವೈಲ್ಡ್ ಲೈಫ್‍ನ ಪ್ರಸಿದ್ಧ ಛಾಯಾಗ್ರಾಹಕರಾದ ಶ್ರೀ ಸಂತೋಷ್ ಗಿರಿ ಮೌಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟನೆ ನೆರವೇರಿಸಲಿದ್ದಾರೆ. ಎ. ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಶ್ರೀನಿವಾಸ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಶ್ರೀ ಸಿ.ಎ. ಎ. ರಾಘವೇಂದ್ರ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮಂಗಳೂರಿನ ಲಿಬೆಕಸ್ಟಂ ಟೀಸ್ ಇವರ ಮುಖ್ಯಸ್ಥರಾದ ಡಾ. ಕೆ.ಜಿ. ರಾಜಾ, ನಗರದ ಹೋಟೆಲ್ ರೂಫಾದ ವ್ಯವಸ್ಥಾಪಕರಾದ ಶ್ರೀ ನಿಶಾಂಕ್ ಸುವರ್ಣ, ಆಕ್ಸಿಸ್ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕರಾದ ಶ್ರೀ ಡಾರೆನ್ ಮೊಂತೆರೋ, ಎ. ಶಾಮರಾವ್ ಪ್ರತಿಷ್ಠಾನದ ಉಪಾಧ್ಯಕ್ಷರು ಹಾಗೂ ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ ರಾವ್, ಕಾರ್ಯದರ್ಶಿ ಶ್ರೀಮತಿ ಮಿತ್ರಾ ಎಸ್. ರಾವ್ ಮತ್ತು ಶ್ರೀನಿವಾಸ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಪಿ. ಎಸ್. ಐತಾಳ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Also Read  ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ್ತಿ ಅಂಕಿತಾ ರೈನಾ ಲುವಾನ್‌ ಟೆನಿಸ್‌ಕ್ವಾರ್ಟರ್‌ ಫೈನಲ್ ಗೆ

ಎಂಬಿಎ ವಿಭಾಗದ ಪ್ರಾಧ್ಯಾಪಕರುಗಳಾದ ಪ್ರೊ. ಅನುಮೇಶ್ ಕಾರಿಯಪ್ಪ ಮತ್ತು ಪ್ರೊ. ಸಾಗರ್‍ರವರು ಈ ಸ್ಪರ್ಧೋತ್ಸವದ ಸಂಚಾಲಕರಾಗಿದ್ದು, ಶ್ರೀ ಕಾರ್ತಿಕ್ ನಾಯಕ್ ವಿದ್ಯಾರ್ಥಿ ಸಂಚಾಲಕರಾಗಿರುತ್ತಾರೆ. ಸುಮಾರು 25 ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಈ ಸ್ಪರ್ಧೋತ್ಸವದಲ್ಲಿ ಪಾಲ್ಗೊಂಡು ಸ್ಪರ್ಧೋತ್ಸವದ ವಿವಿಧ ವಿಭಾಗಗಳಲ್ಲಿ ಭಾಗವಹಿಸಿ ತಮ್ಮ ಪ್ರೌಢಿಮೆ ಪ್ರದರ್ಶಿಸಲಿದ್ದಾರೆ ಎಂದು ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: Content is protected !!
Scroll to Top