ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸಾಧನೆಗೈದ ನೆಲ್ಯಾಡಿಯ ಯುವಕ ➤ ಸ್ಟೆನ್ಸಿಲ್ ಕಟ್ ನಲ್ಲಿ ಮೋದಿಯ ಚಿತ್ರ ಬಿಡಿಸಿದ ಪರೀಕ್ಷಿತ್

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಅ.13. ಕಾಗದವನ್ನು ಕತ್ತರಿಸಿ ಕೆಲವೇ ನಿಮಿಷಗಳಲ್ಲಿ ಚಿತ್ರ ಬಿಡಿಸಿದ ನೆಲ್ಯಾಡಿಯ ಯುವಕನೋರ್ವ “ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್ಸ್” ನಲ್ಲಿ ತನ್ನ ಹೆಸರನ್ನು ಸೇರಿಸಿಕೊಂಡಿದ್ದಾರೆ.

ಸ್ಟೆನ್ಸಿಲ್ ಚಾಕು ಹಿಡಿದು ಪೇಪರನ್ನು ಕೊರೆದು (ಸ್ಟೆನ್ಸಿಲ್ ಕಟ್) ಕಲಾ ಪ್ರಪಂಚವೇ ಬೆರಗಾಗುವಂತೆ ಮಾಡುವ ದಕ್ಷಿಣ ಕನ್ನಡ ಜಿಲ್ಲೆಯ ಪರೀಕ್ಷಿತ್ ನೆಲ್ಯಾಡಿ ಕೇವಲ 3 ನಿಮಿಷ 12 ಸೆಕೆಂಡುಗಳ ಅವಧಿಯಲ್ಲಿ ಬಿಳಿ ಮತ್ತು ಕಪ್ಪು ಕಾಗದದ ಹಾಳೆಯನ್ನು ಬಳಸಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಪೇಪರ್ ನಲ್ಲಿ ಮೂಡಿಸಿ ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಭಾರತದಿಂದ ಒಟ್ಟು ಮೂವರು ಭಾಗವಹಿಸಿದ್ದು, ಅದರಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ದಾಖಲೆಯನ್ನು ಬರೆದಿದ್ದಾರೆ.

Also Read  ➤ ಹಾವಿನಿಂದ ಮಾಲೀಕನನ್ನು ರಕ್ಷಿಸಿದ ಶ್ವಾನ

ನೆಲ್ಯಾಡಿಯ ಜ್ಞಾನೋದಯ ಬೆಥನಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದಿರುವ ಪರೀಕ್ಷಿತ್, ಮಂಗಳೂರಿನ ಶಕ್ತಿನಗರದ ಸ್ವರೂಪ ಅಧ್ಯಯನ ಕೇಂದ್ರದ ಪ್ರಸಿದ್ಧ ಕಲಾ ಶಿಕ್ಷಕ ಗೋಪಡ್ಕರ್ ಅವರಿಂದ ಕಲಾ ತರಬೇತಿಯನ್ನು ಪಡೆದಿದ್ದಾರೆ. ಸ್ಟೆನ್ಸಿಲ್ ಕಟ್ ಕಲೆ ಮಾತ್ರವಲ್ಲದೆ, ಪರೀಕ್ಷಿತ್ ಅವರು ಬೆಂಕಿ ಬಳಸಿ ಮಾಡುವ ಫೈರ್ ಆರ್ಟ್ (ಬೆಂಕಿಯನ್ನೇ ಮಾಧ್ಯಮವಾಗಿ ಬಳಸಿ ಕಲಾಕೃತಿ) ನ್ನು ಕರಗತ ಮಾಡಿಕೊಂಡಿದ್ದಾರೆ.

error: Content is protected !!
Scroll to Top