ಮಹಿಳೆಯೋರ್ವರು ರಸ್ತೆಬದಿಯಲ್ಲಿ ಹೋಗುತ್ತದ್ದ ವೇಳೆ ಮೋಟಾರ್ ಸೈಕಲ್ ಡಿಕ್ಕಿ

(ನ್ಯೂಸ್ ಕಡಬ) newskadaba.com ಬಂಟ್ವಾಳ,ಅಕ್ಟೋಬರ್.10. ಮಹಿಳೆಯೋರ್ವರು ರಸ್ತೆ ಬದಿಯಲ್ಲಿ  ನಡೆದುಕೊಂಡು ಹೋಗುತ್ತದ್ದ ವೇಳೆ ಮೋಟಾರ್ ಸೈಕಲೊಂದು ಡಿಕ್ಕಿ ಹೊಡೆದು ಘಾಯಗೊಂಡ ಘಟನೆ ನಡೆದಿದೆ.

ಶ್ರೀಮತಿ ರಮಾ, ಎಂಬರು ಪುಂಚಮೆ ಎಂಬಲ್ಲಿ ಬಿ.ಸಿ.ರೋಡ್ ಕಡೆಯಿಂದ ಮೋಟಾರ್ ಸೈಕಲೊಂದನ್ನು ಅದರ ಸವಾರ ಅತೀ ವೇಗ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ರಮಾರವರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ದೂರುದಾರರು ಎಸೆಯಲ್ಪಟ್ಟು ರಸ್ತೆಗೆ ಬಿದ್ದು, ಬಲಕಾಲಿಗೆ ಹಾಗೂ ಬಲಕೈಯ ಮಣಿಗಂಟಿಗೆ ಗುದ್ದಿದ ಗಾಯಗಳಾಗಿವೆ. ಅಪಘಾತದ ಬಳಿಕ ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ಪರಾರಿಯಾಗಿದ್ದಾನೆ. ಅಪಘಾತದಲ್ಲಿ ಗಾಯಗೊಂಡ ರಮಾರವರು ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
Gems

Scroll to Top