ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 2013 ಖಾಲಿ ಹುದ್ದೆಗಳು ➤ ಸಿವಿಲ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಹೊಸದಾಗಿ ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗೆ ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಬಾರಿ ಸುಮಾರು 2013 ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಕೆಗೆ 2019 ಅಕ್ಟೋಬರ್ 17 ಕೊನೆಯ ದಿನಾಂಕವಾಗಿದೆ. ಆಸಕ್ತ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ 60 ಪುರುಷರು ಹಾಗೂ 18 ಮಹಿಳಾ ಹುದ್ದೆಯನ್ನು ಮೀಸಲಿರಿಸಲಾಗಿದೆ.

ಸಾಮಾನ್ಯ ಪ್ರವರ್ಗದ ಅಭ್ಯರ್ಥಿಯು 19 ರಿಂದ 25 ವರ್ಷದ ಒಳಗಿನವರಾಗಿರಬೇಕು. ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಯು 19 ರಿಂದ 27 ವರ್ಷದ ಒಳಗಿನ ವಯೋಮಿತಿಯವರಾಗಿರಬೇಕು. ಹಾಗೂ ಬುಡಕಟ್ಟು ಜನಾಂಗಕ್ಕೆ ಸೇರಿದ ಅಭ್ಯರ್ಥಿಯು 19 ರಿಂದ 30 ವರ್ಷದ ಒಳಗಿನ ವಯೋಮಿತಿಯನ್ನು ಹೊಂದಿರಬೇಕು. ಪುರುಷ ಅಭ್ಯರ್ಥಿಗಳ ಕನಿಷ್ಠ ಎತ್ತರ 168 ಸೆಂ.ಮೀ. ಮತ್ತು ಕನಿಷ್ಠ ಎದೆಯ ಸುತ್ತಳತೆ 86 ಸೆಂ.ಮೀ. ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 157 ಸೆಂ.ಮೀ. ಮತ್ತು ಕನಿಷ್ಠ ತೂಕ 45 ಕೆ.ಜಿ.ಯಾಗಿದ್ದು, ಹೆಚ್ಚಿನ ಮಾಹಿತಿಗಾಗಿ ನ್ಯೂಸ್ ಕಡಬ.ಕಾಮ್ ಗೆ ವಿಸಿಟ್ ಮಾಡಿ

Also Read  ಜೀವನದಲ್ಲಿ ಪ್ರೀತಿ ಪ್ರೇಮ, ವ್ಯಾಪಾರ,ಮದುವೆ, ಅಡೆತಡೆಗಳಿಂದ ಮುಕ್ತಿ ಪಡೆಯಲು ಇದನ್ನು ಒಮ್ಮೆ ಪಾಲಿಸಿರಿ ಸಾಕು

ದೇಹದಾಢ್ರ್ಯತೆ ಪರೀಕ್ಷೆ
ಎಲ್ಲಾ ಸಾಮಾನ್ಯ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ
ಕನಿಷ್ಠ ಎತ್ತರ : 168 ಸೆಂ. ಮೀ.
ಕನಿಷ್ಠ ಎದೆ ಸುತ್ತಳತೆ :
86 ಸೆಂ. ಮೀ (ಪೂರ್ತಿ ವಿಸ್ತರಿಸಿದಾಗ) ಕನಿಷ್ಟ ವಿಸ್ತರಣೆ 5 ಸೆಂ. ಮೀ.
ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ : 157 ಸೆಂ. ಮೀ. ಕನಿಷ್ಠ ತೂಕ : 45 ಕೆ.ಜಿ.

ಮಾಹಿತಿಗಾಗಿ ಕ್ಲಿಕ್ ಮಾಡಿ

http://rec19.ksp-online.in/

ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ
ವಾಸಿಸುತ್ತಿರುವ ಬುಡಕಟ್ಟು
ಪುರುಷ ಅಭ್ಯರ್ಥಿಗಳ
ಕನಿಷ್ಠ ಎತ್ತರ : 155 ಸೆಂ. ಮೀ.
ಎದೆ ಸುತ್ತಳತೆ : 5 ಸೆಂ.ಮೀ.ಗಳ ಕನಿಷ್ಠ ವಿಸ್ತರಿಸುವುದರೊಂದಿಗೆ
ಸಂಪೂರ್ಣವಾಗಿ ಹಿಗ್ಗಿಸಿದಾಗ 75 ಸೆಂ.ಮೀ.ಗಳಿಗಿಂತ
ಕಡಿಮೆ ಇಲ್ಲದಂತೆ.
ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ
ವಾಸಿಸುತ್ತಿರುವ ಬುಡಕಟ್ಟು
ಮಹಿಳಾ ಅಭ್ಯರ್ಥಿಗಳಿಗೆ
ಕನಿಷ್ಠ ಎತ್ತರ : 150 ಸೆಂ. ಮೀ.

error: Content is protected !!
Scroll to Top