ಸುಳ್ಯದ ಯುವಕನಿಗೆ ಒಲಿದ ಅದೃಷ್ಟ ➤ ಅಬುದಾಬಿ ಲಾಟರಿಯಲ್ಲಿ 23 ಕೋಟಿ ರೂ. ಬಹುಮಾನ



(ನ್ಯೂಸ್ ಕಡಬ) newskadaba.com ಸುಳ್ಯ, ಅ.04. ಸುಳ್ಯದ ಯುವಕನೋರ್ವನಿಗೆ ಅದೃಷ್ಟದ ಬಾಗಿಲು ತೆರೆದಿದ್ದು, 12 ಮಿಲಿಯನ್ ದಿರ್ಹಂ (ಸುಮಾರು 23 ಕೋಟಿ) ಅಬುದಾಬಿ ಲಾಟರಿಯ ಪ್ರಥಮ ಬಹುಮಾನ ಗುರುವಾರದಂದು ಲಭಿಸಿದೆ.





ಉದ್ಯಾನ ನಗರಿ ಮುಂಬೈನ ಕಂಪೆನಿಯೊಂದರಲ್ಲಿ ಅಕೌಂಟೆಂಟ್ ಅಗಿರುವ ಸುಳ್ಯದ ಜಟ್ಟಿಪಳ್ಳ ನಿವಾಸಿ ಫಯಾಝ್ ಈ ಅದೃಷ್ಟದಾತ. ಕಳೆದ ಆರು ತಿಂಗಳಿನಿಂದ ತನ್ನ ಸ್ನೇಹಿತನೋರ್ವನ‌ ಮೂಲಕ ಅಬುದಾಬಿ ಲಾಟರಿ ಟಿಕೆಟ್ ಗಳನ್ನು ಖರೀದಿಸುತ್ತಿದ್ದ ಫಯಾಝ್ ಗೆ ಗುರುವಾರದಂದು ಅದೃಷ್ಟ ಖುಲಾಯಿಸಿದ್ದು, ಸುಮಾರು 23 ಕೋಟಿಯನ್ನು ಗೆಲ್ಲುವ ಮೂಲಕ ದಿನ ಬೆಳಗಾಗುವುದರೊಳಗೆ ಕೋಟಿಯಾಧಿಪತಿಯಾಗಿದ್ದಾರೆ.






error: Content is protected !!
Scroll to Top