ಕುಂಡಾಜೆ ಶಾಲೆಗೆ ರೂ,20ಸಾವಿರ ವೆಚ್ಚದಲ್ಲಿ ಸೋಲಾರ್ ದೀಪ ಹಸ್ತಾಂತರ

(ನ್ಯೂಸ್ ಕಡಬ) newskadaba.com ಕಡಬ, ಆ .18, ರಾಮಕುಂಜ ಗ್ರಾಮದ ಕುಂಡಾಜೆ ಶಾಲೆಗೆ ಸೋಲಾರ್ ದೀಪದ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಜನ ಶಿಕ್ಷಣ ಟ್ರಸ್ಟ್‌ ಮಂಗಳೂರು, ಸೆಲ್ಕೊಸೋಲಾರ್ ಪೌಂಡೇಶನ್ ಪುತ್ತೂರು, ಕೃಷಿ ಪತ್ತಿನ ಸಹಕಾರಿ ಸಂಘ ಆಲಂಕಾರು, ಒಡಿಯೂರು ಘಟಕ ಸಮಿತಿ ಕುಂಡಾಜೆ, ವಿದ್ಯಾರ್ಥಿ ಪೋಷಕರು, ಎಸ್.ಡಿ.ಎಮ್.ಸಿ ಸದಸ್ಯರು ಮತ್ತು ದಾನಿಗಳ ನೆರವಿನಿಂದ ರೂ,20ಸಾವಿರ ವೆಚ್ಚದಲ್ಲಿ ಸೋಲಾರ್ ದೀಪವನ್ನು ಶಾಲೆಗೆ ಅಳವಡಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ವಜ್ರಮಹೋತ್ಸವ ಸಮಿತಿ ಅಧ್ಯಕ್ಷ, ರಾಮಕುಂಜ ಗ್ರಾ.ಪಂ.ಸದಸ್ಯರಾದ ಯತೀಶ್ ಬಾನಡ್ಕ, ರಾಮಕುಂಜ ಗ್ರಾ.ಪಂ. ಸದಸ್ಯೆ ವಾರಿಜ, ದತ್ತುನಿಧಿ ಸಮಿತಿ ಅಧ್ಯಕ್ಷ ಇಂದುಶೇಖರ್ ಶೆಟ್ಟಿ, ಸ್ಥಳೀಯರಾದ ಇಬ್ರಾಹಿಂ ಕುಂಡಾಜೆ, ಒಡಿಯೂರು ಘಟಕ ಸಮಿತಿ ಅಧ್ಯಕ್ಷ ಮೋನಪ್ಪ ಕೊನೆಮಜಲು, ಸ್.ಡಿ.ಎಮ್.ಸಿ ಅಧ್ಯಕ್ಷರಾದ ಮುತ್ತಪ್ಪ ಗೌಡ, ಉಪಾಧ್ಯಕ್ಷೆ ಪದ್ಮಾವತಿ, ಹಿರಿಯ ವಿದ್ಯಾರ್ಥಿ ದಿನೇಶ್ ಗಾಣಂತಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಪಿ.ಎಸ್ ನಾರಾಯಣ ವಂದಿಸಿದರು.

Scroll to Top