(ನ್ಯೂಸ್ ಕಡಬ) newskadaba.com ಕಡಬ, ಸೆ.28. ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಜೋಡಿಯೊಂದು ಸಾರ್ವಜನಿಕರನ್ನು ಕಂಡ ಕೂಡಲೇ ಕಾರಿನಲ್ಲಿ ಪರಾರಿಯಾದ ಘಟನೆ ಶನಿವಾರದಂದು ಕಡಬ ಠಾಣಾ ವ್ಯಾಪ್ತಿಯ ಕೊಯಿಲದ ಕೆ.ಸಿ. ಫಾರ್ಮ್ ಬಳಿ ನಡೆದಿದೆ.
ಕೊಯಿಲದ ಕೆ.ಸಿ. ಫಾರ್ಮ್ ನ ಗುಡ್ಡದ ಮೇಲೆ ಹಸಿರು ಹುಲ್ಲು ಬೆಳೆದಿದ್ದು, ಪ್ರಕೃತಿಯ ಸೌಂದರ್ಯವನ್ನು ವೀಕ್ಷಿಸಲು ಹಲವರು ಬರುತ್ತಿದ್ದಾರೆ. ಶನಿವಾರದಂದು ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಆಗಮಿಸಿದ ಜೋಡಿಯೊಂದು ಕೆ.ಸಿ. ಫಾರ್ಮ್ ಬಳಿ ಕಾರು ನಿಲ್ಲಿಸಿ ಅನುಮಾನಾಸ್ಪದವಾಗಿ ವರ್ತಿಸುವುದನ್ನು ಕಂಡ ಸಾರ್ವಜನಿಕರು ಅವರತ್ತ ಸಾಗುವುದನ್ನು ಕಂಡು ಜೋಡಿ ಕಾರು ಹತ್ತಿ ಪರಾರಿಯಾಗಿದ್ದಾರೆ. ತಕ್ಷಣವೇ ಬೇರೆ ವಾಹನದಲ್ಲಿ ಕಾರನ್ನು ಬೆನ್ನಟ್ಟಿದ ಸ್ಥಳೀಯರು ಕಾರಿನ ನೋಂದಣಿ ಸಂಖ್ಯೆಯೊಂದಿಗೆ ಕಡಬ ಠಾಣೆಗೆ ಮಾಹಿತಿ ನೀಡಿದ್ದು, ಅದಾಗಲೇ ಕಾರಿನಲ್ಲಿ ಬಂದ ಜೋಡಿಯು ಮಾರ್ಗ ಬದಲಿಸಿ ಪರಾರಿಯಾಗಿದೆ. ಇದೀಗ ಕಾರಿನ ನೋಂದಣಿ ಸಂಖ್ಯೆಯ ಜಾಡು ಹಿಡಿದ ಕಡಬ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.