ಬಲ್ಯ: ಮುಖ್ಯ ರಸ್ತೆಯಲ್ಲೇ ಕಾಡಾನೆ ಪ್ರತ್ಯಕ್ಷ

(ನ್ಯೂಸ್ ಕಡಬ) newskadaba.com ಕಡಬ, ಸೆ.28. ಉಪ್ಪಿನಂಗಡಿ – ಕಡಬ ಹೆದ್ದಾರಿಯ ಬಲ್ಯ ಸಮೀಪ ಶುಕ್ರವಾರ ತಡರಾತ್ರಿ ಕಾಡಾನೆ ಪ್ರತ್ಯಕ್ಷವಾಗಿದ್ದು, ರಾತ್ರಿ ಸಂಚರಿಸುವವರು ಜಾಗ್ರತೆ ವಹಿಸಬೇಕಾದ ಅನಿವಾರ್ಯತೆ ಉಂಟಾಗಿದೆ.

ಈ ಹಿಂದೆಯೂ ಅನೇಕ ಬಾರಿ ರಾತ್ರಿ ವೇಳೆಗಳಲ್ಲಿ ಕಾಡಾನೆ, ಕಡವೆ, ಜಿಂಕೆ ಸೇರಿದಂತೆ ಹಲವು ಕಾಡು ಪ್ರಾಣಿಗಳು ಬಲ್ಯ ಹಾಗೂ ಪದವು ಮಧ್ಯೆ ಕಂಡು ಬಂದಿದ್ದು, ಶುಕ್ರವಾರ ತಡರಾತ್ರಿ ಬಲ್ಯದಿಂದ ನೆಲ್ಯಾಡಿಗೆ ತೆರಳುವ ರಸ್ತೆಯಲ್ಲಿ ಕಾಡಾನೆ ಸಂಚರಿಸುವ ದೃಶ್ಯ ಕಂಡುಬಂದಿದೆ.

Scroll to Top