ವ್ಯಕ್ತಿ ಕಾಣೆಯಾಗಿದ್ದಾರೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.25.ಮಂಗಳೂರು ತಾಲೂಕು, ಕೊಂಪದವು ಗ್ರಾಮದ ಹುಣ್ಸೆದಡಿ ನಿವಾಸಿ ಶೀನ ಗೌಡ (86) ಎಂಬವರು ಆಗಸ್ಟ್ 18 ರಂದು ಮಂಗಳೂರಿಗೆ ಹೋದವರು ಮನೆಗೆ ಹಿಂದಿರುಗಿ ಬಾರದೇ ಕಾಣೆಯಾಗಿದ್ದಾರೆ ಎಂದು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಾಣೆಯಾದ ವ್ಯಕ್ತಿಯ ಚಹರೆ ಇಂತಿವೆ ; ಎತ್ತರ 5 ಅಡಿ, 4 ಇಂಚು, ಗೋಧಿ ಮೈಬಣ್ಣ ಸಾಧಾರಣ ಮೈಕಟ್ಟು, ಕೋಲು ಮುಖ, ಬಿಳಿ ಕೂದಲು, ನೀಲಿ ಬಣ್ಣದ ಶರ್ಟ್ ಮತ್ತು ಮಾಸಿದ ಗೆರೆಗಳಿರುವ ಲುಂಗಿ ಧರಿಸಿದ್ದಾರೆ, ಕನ್ನಡ, ತುಳು, ಕೊಂಕಣೆ ಭಾಷೆ ಮಾತಾನಾಡುತ್ತಾರೆ.ಈ ಚಹರೆಯುಳ್ಳ ವ್ಯಕ್ತಿಯ ಪತ್ತೆಯಾದಲ್ಲಿ ಬಜಪೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಠಾಣಾಧಿಕಾರಿ, ಬಜಪೆ ಪೊಲೀಸ್ ಠಾಣೆ ಮಂಗಳೂರು ಪ್ರಕಟಣೆ ತಿಳಿಸಿದೆ.

Scroll to Top