ಬೆಂಗರೆ : ಪರಿಸರ ಸಾರ್ವಜನಿಕ ಸಭೆ 14ರಂದು

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.13.ಬಂದರು ಮತ್ತು ಮೀನುಗಾರಿಕೆ ಇಲಾಖೆ, ಉಡುಪಿ ವಿಭಾಗ ಇವರು ಸಾಗರಮಾಲ ಯೋಜನೆಯಡಿನಗರದ ಹಳೇ ಬಂದರಿನಲ್ಲಿ ಕರಾವಳಿ ಬರ್ತ್ ನಿರ್ಮಿಸಲು ಉದ್ದೇಶಿಸಿರುತ್ತಾರೆ.

ಈ ಹಿನ್ನೆಲೆಯಲ್ಲಿ ಸಪ್ಟೆಂಬರ್ 14 ರಂದು ಬೆಳಿಗ್ಗೆ 11 ಗಂಟೆಗೆ ಸರ್ಕಾರಿ ಪ್ರೌಢಶಾಲೆ ಕಸಬಾ ಬೆಂಗರೆ ವಠಾರದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪರಿಸರ ಸಾರ್ವಜನಿಕ ಆಲಿಕೆ ಸಭೆಯನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ನಡೆಸಲಾಗುತ್ತದೆ ಎಂದು ಎಂದುಮಂಡಳಿಯ ಮಂಗಳೂರು ವಿಭಾಗದ ಪರಿಸರ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Scroll to Top