ಪುತ್ತೂರು: ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಬಾಲಕಿಯ ಮಾನಭಂಗಕ್ಕೆ ಯತ್ನ ➤ ಆರೋಪಿಯ ಬಂಧನ – ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.01. ತನ್ನ ತಂದೆಯ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ 10 ವರ್ಷದ ಅಪ್ರಾಪ್ತ ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ಭಾನುವಾರದಂದು ಪುತ್ತೂರಿನ ಕೆಮ್ಮಾಯಿ ಬಳಿ ನಡೆದಿದೆ.

Gems

ಅಪ್ರಾಪ್ತ ಬಾಲಕಿಯೋರ್ವಳು ತನ್ನ ತಂದೆಯ ಆಟೋ ರಿಕ್ಷಾದಲ್ಲಿ ಪುತ್ತೂರಿಗೆ ಬರುತ್ತಿದ್ದ ವೇಳೆ ಅದೇ ಅಟೋ ರಿಕ್ಷಾಕ್ಕೆ ಹತ್ತಿದ ಚಿಕ್ಕಮುಡ್ನೂರು ನಿವಾಸಿ ಕೆ. ಸಾಜುದ್ದೀನ್ (34) ಎಂಬಾತ ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ್ದಾನೆ. ಈ ವಿಚಾರವನ್ನು ಬಾಲಕಿಯು ತನ್ನ ತಂದೆಗೆ ತಿಳಿಸಿದ್ದು, ತಕ್ಷಣ ರಿಕ್ಷಾವನ್ನು ನಿಲ್ಲಿಸಿದಾಗ ಆರೋಪಿಯು ಆಟೋ ರಿಕ್ಷಾದಿಂದ ಕೆಳಗಿಳಿದು ಪರಾರಿಯಾಗಿದ್ದಾನೆ. ವಿಷಯ ತಿಳಿದು ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸತೊಡಗಿದ್ದು, ಪರಿಸರದಲ್ಲಿ ತುಸು ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು‌. ಸ್ಥಳಕ್ಕಾಗಮಿಸಿದ ಪುತ್ತೂರು ಮಹಿಳಾ ಠಾಣಾ ಪೊಲೀಸರು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಮಾವನನ್ನೇ ಕೊಂದ ಪಾಪಿ ಅಳಿಯ...! ➤ ಕಾರಣವೇನೆಂದು ಗೊತ್ತೇ...❓

 

error: Content is protected !!
Scroll to Top