ಕಡಬ: ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ➤ ಕೊಲೆ ಸಂಶಯ ವ್ಯಕ್ತಪಡಿಸಿದ ಮೃತರ ಪುತ್ರ

(ನ್ಯೂಸ್ ಕಡಬ) newskadaba.com ಕಡಬ, ಆ.28. ಇಲ್ಲಿನ ಕಳಾರ ಸಮೀಪದ ಅಡ್ಕಾಡಿ ಎಂಬಲ್ಲಿನ ತೋಟವೊಂದರಲ್ಲಿ ವ್ಯಕ್ತಿಯೋರ್ವರ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರದಂದು ಪತ್ತೆಯಾಗಿದೆ.

 

ಮೃತ ವ್ಯಕ್ತಿಯನ್ನು ಕಳಾರ ಸಮೀಪದ ಅಡ್ಕಾಡಿ ನಿವಾಸಿ ಉಸ್ಮಾನ್(60ವ.) ಎಂದು ಗುರುತಿಸಲಾಗಿದೆ. ಇವರು ಮಂಗಳವಾರ ರಾತ್ರಿ 9 ಗಂಟೆಯ ಬಳಿಕ ಮನೆಯಿಂದ ನಾಪತ್ತೆಯಾಗಿದ್ದರಿಂದ ಇವರ ಮನೆಯವರು ಇಂದು ಬೆಳಿಗ್ಗೆಯಿಂದ ಹುಡುಕಾಡುತ್ತಿದ್ದಾಗ ಈ ವೇಳೆ ಮನೆಯ ರಬ್ಬರ್ ತೋಟದಲ್ಲಿ ರಬ್ಬರ್ ಮರದ ಗೆಲ್ಲಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಉಸ್ಮಾನ್ ಅವರ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಆಲಂಕಾರು ವಿಶೇಷ ಗ್ರಾಮ ಸಭೆ ► ಅಧಿಕಾರಿಗಳ ವಿರುದ್ದ ಗ್ರಾಮಸ್ಥರ ಆಕ್ರೋಶ

ಮೃತ ದೇಹವನ್ನು ಗಮನಿಸಿದಾಗ ಸಂಶಯ ಉಂಟಾಗುತ್ತಿದ್ದು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿ ಮೃತರ ಪುತ್ರ ಅಬ್ದುಲ್ ಖಾದರ್ ಕಡಬ ಪೋಲಿಸರಿಗೆ ದೂರು ನೀಡಿದ್ದಾರೆ.

error: Content is protected !!
Scroll to Top